ಹಿದಾಯತುಲ್ ಇಸ್ಲಾಂ ಸೆಕೆಂಡರಿ ಮದ್ರಸ, ಹಿದಾಯ ಅರೇಬಿಕ್ ಮದ್ರಸ, ಬಹ್ಜತು ತ್ವಲಬಾ ದರ್ಸ್, ಝಖರಿಯಾ ಜುಮಾ ಮಸ್ಜಿದ್ ಬೆಳ್ಳಾರೆ ಇದರ ವತಿಯಿಂದ ಈದ್ ಮಿಲಾದ್ ಪ್ರಯುಕ್ತ ಸೆ. 03, 04 ಮತ್ತು 05 ರಂದು ನಡೆಯಲಿರುವ ಮದ್ರಸಾ ವಿದ್ಯಾರ್ಥಿಗಳ ಕಲಾ ಸಾಹಿತ್ಯ ಸ್ಪರ್ಧಾ ಕಾರ್ಯಕ್ರಮ ಅಲ್ ಮುವಾಹಿಬ್ 2025 ಮಿಲಾದ್ ಫೆಸ್ಟ್ ಸೆ. 3ರಂದು ಹಿದಾಯತುಲ್ ಇಸ್ಲಾಂ ಮದ್ರಸ ವಠಾರದಲ್ಲಿ ಜರುಗಿತು. ಜಮಾಅತ್ ಅಧ್ಯಕ್ಷ ಯು.ಹೆಚ್ ಅಬೂಬಕ್ಕರ್ ಅಧ್ಯಕ್ಷತೆ ವಹಿಸಿದ್ದರು.
















ಕಾರ್ಯಕ್ರಮವನ್ನು ಸ್ಥಳೀಯ ಮುದರ್ರಿಸರಾದ ಬಹು ನಸೀಹ್ ದಾರಿಮಿ ಉದ್ಘಾಟಿಸಿ ಶುಭ ಹಾರೈಸಿದರು. ಅಧ್ಯಾಪಕರುಗಳಾದ ಬಹು ಝೈನುದ್ದೀನ್ ಮುಸ್ಲಿಯಾರ್, ಶಾಕಿರ್ ಫೈಝಿ, ಝಕರಿಯ್ಯಾ ಮೌಲವಿ, ಆರಿಫ್ ಹುದವಿ, ಅರ್ಷದ್ ಫೈಝಿ, ಮುಅಝಿನ್ ಶರೀಫ್ ನಿಝಾಮಿ, ಜಮಾಅತ್ ಉಪಾಧ್ಯಕ್ಷ ಅಬ್ದುಲ್ ಖಾದರ್ ಹಾಜಿ, ಕಾರ್ಯದರ್ಶಿ ಬಸೀರ್ ಕಲ್ಲಪನೆ, ಕೋಶಾಧಿಕಾರಿ ನಝೀರ್ ಯು.ಎ, ಹಿರಿಯರಾದ ಮಮ್ಮಾಲಿ ಹಾಜಿ, ಇಸ್ಮಾಯಿಲ್ ಉಮಿಕ್ಕಳ, ಆಡಳಿತ ಸಮಿತಿ ಸದಸ್ಯರುಗಳಾದ ಹಮೀದ್ ಕೆ.ಎಂ, ಉಸ್ಮಾನ್ ಹಾಜಿ, ಹಮೀದ್ ಹೆಚ್.ಎಮ್, ಅಝರುದ್ದೀನ್ ಎಮ್,
ಕೆ.ಎ.ಬಶೀರ್ ಬೆಳ್ಳಾರೆ, ತೀರ್ಪುಗಾರರಾದ ರಫೀಕ್ ಹನೀಫಿ, ಮೌಲವಿ ಮುಹಮ್ಮದ್ ಮಿಖ್ದಾದ್, ಪಿಟಿಎ ಅಧ್ಯಕ್ಷ ಆರಿಫ್ ಬೆಳ್ಳಾರೆ, ಸದಸ್ಯ ಅಶ್ರಫ್ ಪ್ರಗತಿ, ಉಪಸ್ಥಿತರಿದ್ದರು. ನಂತರ ಮದ್ರಸ ವಿದ್ಯಾರ್ಥಿಗಳ ವಿವಿಧ ರೀತಿಯ ಕಲಾ ಸಾಹಿತ್ಯ ಸ್ಪರ್ಧೆ ನಡೆಯಿತು. ಮುಕ್ಯೋಪಾಧ್ಯಾಯರಾದ ಮುಹಮ್ಮದ್ ಮುಸ್ಲಿಯಾರ್ ಸ್ವಾಗತಿಸಿ ವಂದಿಸಿದರು.










