ಮೊಗರ್ಪಣೆ: ಮದ್ರಸಾ ವಿದ್ಯಾರ್ಥಿಗಳ ಮಿಹ್ರಾಜ್ ರಬೀಹ್ ಫೆಸ್ಟ್ ಕಲಾ ಸಾಹಿತ್ಯ ಸ್ಪರ್ಧೆ 2025 ಕ್ಕೆ ಚಾಲನೆ

0

ಮೊಗರ್ಪಣೆ : ಹಿದಾಯತುಲ್ ಇಸ್ಲಾಂ ಜಮಾಅತ್ ಕಮಿಟಿ ಹಾಗೂ ನೂರುಲ್ ಇಸ್ಲಾಂ ಹೈಯರ್
ಸೆಕೆಂಡರಿ ಮದ್ರಸ ಇದರ ಆಶ್ರಯದಲ್ಲಿ ಈದ್ ಮೀಲಾದ್ ಅಂಗವಾಗಿ ನಡೆಯುತ್ತಿರುವ ಮಿಹ್ರಾಜ್ ಮೀಲಾದ್ ಫೆಸ್ಟ್ 2025 ರ ಮದ್ರಸಾ ವಿದ್ಯಾರ್ಥಿಗಳ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮಕ್ಕೆ ಸೆ. 4 ರಂದು ಚಾಲನೆ ನೀಡಲಾಯಿತು.

ಸ್ಥಳೀಯ ಮಸೀದಿ ಮುದರ್ರಿಸ್ ಅಬ್ದುಲ್ ಖಾದರ್ ಸಖಾಫಿ ಅಲ್ ಖಾಮಿಲ್ ರವರು ಪ್ರಾರ್ಥನೆ ಮಾಡುವ ಮೂಲಕ ಉದ್ಘಾಟಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಸೀದಿ ಆಡಳಿತ ಸಮಿತಿ ಉಪಾಧ್ಯಕ್ಷ ಸಿ ಎಂ ಉಸ್ಮಾನ್ ರವರು ವಹಿಸಿದ್ದರು. ವೇದಿಕೆಯಲ್ಲಿ ಪ್ರಧಾನ ಕಾರ್ಯದರ್ಶಿ ಎಸ್ ಯು ಇಬ್ರಾಹಿಂ, ಮೀಲಾದ್ ಸ್ವಾಗತ ಸಮಿತಿ ಚಯರ್ಮೆನ್ ಹನೀಫ್ ಜಯನಗರ,ಕನ್ವಿನರ್ ಅಶ್ರಫ್ ಸಂಗಮ್, ಮದ್ರಸ ಸದರ್ ಮುಅಲ್ಲಿಮ್ ಅಬ್ದುಲ್ ಕರೀಂ ಸಖಾಫಿ, ಮದ್ರಸಾ ಅಧ್ಯಾಪಕರುಗಳಾದ ಬಷೀರ್ ಮದನಿ, ಅಬ್ದುಲ್ ರಶೀದ್ ಝೖನಿ, ಶಫೀಕ್ ಹಿಮಮಿ,ನಿರ್ಣಾಯಕರು ಗಳಾದ ಬೈತಡ್ಕ ಅಬೂಬಕ್ಕರ್ ಹಂದಾನಿ, ಸಯ್ಯಿದ್ ಹುಸೈನ್ ಪಾಷ ಸಅದಿ ತಂಗಳ್ ಉಪಸ್ಥಿತರಿದ್ದರು.

ಮದ್ರಸ ವಿದ್ಯಾರ್ಥಿಗಳ ವಿವಿಧ ರೀತಿಯ ಕಲಾ ಸಾಹಿತ್ಯ ಸ್ಪರ್ಧೆಯಲ್ಲಿ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ವಿವಿಧ ಸ್ಪರ್ಧೆಗಳನ್ನು ನೀಡಲಿದ್ದಾರೆ.
ಮುಅಲ್ಲಿಮ್ ಗಳಾದ ಹಂಝ ಸಖಾಫಿ ಸ್ವಾಗತಿಸಿ ಅಬೂಬಕ್ಕರ್ ಸಿದ್ದೀಕ್ ಸಖಾಫಿ ಮತ್ತು ಅಬ್ದುಲ್ ನಾಸಿರ್ ಸಖಾಫಿ ಕಾರ್ಯಕ್ರಮ ನಿರೂಪಿಸಿದರು.