ಕಸಾಪ ಸುಳ್ಯ ವತಿಯಿಂದ ಶಿಕ್ಷಕ – ಸಾಹಿತಿ ಕಲಾವಿದರಿಗೆ ಗೌರವಾರ್ಪಣೆ

0



ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶಿಕ್ಷಕ – ಸಾಹಿತಿ ಕಲಾವಿದರಿಗೆ ಪ್ರತಿ ವರ್ಷ ಸನ್ಮಾನ ಕಾರ್ಯಕ್ರಮ ವನ್ನು ಇಟ್ಟು ಕೊಂಡಿದ್ದು, ಸೆಪ್ಟೆಂಬರ್ 5 ರಂದು ಪೂರ್ವಾಹ್ನ 8. 30 ಕ್ಕೆ ನಿವೃತ್ತ ಶಿಕ್ಷಕ ಹಾಗೂ ನಾಟಕ ಕಲಾವಿದ ಆರ್ ಕೆ ಭಾಸ್ಕರ ಬಾಳಿಲರಿಗೆ ಮತ್ತು ಅಪರಾಹ್ನ 4.00 ಕ್ಕೆ ನಿವೃತ್ತ ಶಿಕ್ಷಕಿ ಹಾಗೂ ಕಲಾವಿದೆ ಶ್ರೀಮತಿ ಕಲಾವತಿ ಅಟ್ಲೂರು ಅವರಿಗೆ ಸನ್ಮಾನ ಕಾರ್ಯಕ್ರಮವನ್ನು ಏರ್ಪಡಿಸಿದ್ದು ಅವರ ನಿವಾಸಗಳಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಆಸಕ್ತರು ಭಾಗವಹಿಸಬೇಕೆಂದು ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಚಂದ್ರಶೇಖರ್ ಪೆರಾಲ್ ಅವರು ತಿಳಿಸಿರುತ್ತಾರೆ