ಐವರು ಶಿಕ್ಷಕರಿಗೆ ಮಲೆನಾಡ ಸಿರಿ ಶಿಕ್ಷಕ ಪ್ರಶಸ್ತಿ : ಸೆ.6ರಂದು ಪ್ರದಾನ

0

ನಗರ ಪಂಚಾಯತ್ ಸದಸ್ಯ ರಿಯಾಜ್ ಕಟ್ಟೆಕಾರ್ ನೇತೃತ್ವದ ಮಲೆನಾಡು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶಿಕ್ಷಕರ ದಿನಾಚರಣೆ ಪ್ರಯುಕ್ತ ಕೊಡಮಾಡುವ ಮಲೆನಾಡ ಸಿರಿ ಶಿಕ್ಷಕ ಪ್ರಶಸ್ತಿ ಗೆ ಐವರು ಶಿಕ್ಷಕರು ಭಾಜನರಾಗಿದ್ದು, ಸೆ.6ರಂದು ಪ್ರಶಸ್ತಿ ಪ್ರದಾನ ನಡೆಯಲಿದೆ.

ಸುಳ್ಯ ಡಿಗ್ರಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಸತೀಶ್ ಕುಮಾರ್ ಕೆ.ಆರ್., ಗಾಂಧಿನಗರ ಕೆಪಿಎಸ್ ನ ವಿಜ್ಞಾನ ಶಿಕ್ಷಕ ಇಬ್ರಾಹಿಂ ಎಸ್.ಎಂ., ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆಯ ಶಿಕ್ಷಕಿ ಜಯಂತಿ ಕೆ., ರೋಟರಿ ವಿದ್ಯಾಸಂಸ್ಥೆಯ ಗಣಕ ಶಾಸ್ತ್ರ ಉಪನ್ಯಾಸಕ ಹರ್ಷಿತ್ ದಾತಡ್ಕ, ಪೆರುವಾಜೆ ಸ.ಹಿ.ಪ್ರಾ.ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಶ್ರುತಿ ಯವರು ಮಲೆನಾಡ ಸಿರಿ ಪ್ರಶಸ್ತಿ ಗೆ ಭಾಜನರಾದವರು.