














ಸುಳ್ಯ ಕೊಡಿಯಾಲಬೈಲು ಮಹಾತ್ಮಾ ಗಾಂಧಿ ಮಲ್ನಾಡು ಶಾಲಾ ಕಟ್ಟಡ ನಿಧಿಗೆ ನಿವೃತ್ತ ಅರಣ್ಯಪಾಲಕ ಅಮೈ ಸುಂದರ ಗೌಡರವರು ರೂಪಾಯಿ ಒಂದು ಲಕ್ಷ ದೇಣಿಗೆಯನ್ನು ನೀಡಿದರು. ಈ ಸಂದರ್ಭದಲ್ಲಿ ಅವರನ್ನು ಗೌರವಿಸಲಾಯಿತು. ಗೌಡ ಸೋಶಿಯೋ ಎಜುಕೇಷನ್ ಸೊಸೈಟಿ ಅಧ್ಯಕ್ಷ ಪಿ. ಎಸ್. ಗಂಗಾಧರ, ಶ್ರೀ ವೆಂಕಟರಮಣ ಸೊಸೈಟಿ ಅಧ್ಯಕ್ಷ ಕೆ.ಸಿ. ಸದಾನಂದ, ಉಪಾಧ್ಯಕ್ಷ ದಿನೇಶ್ ಮಾಡಪ್ಪಾಡಿ, ಎನ್. ಎಸ್. ದಾಮೋದರ, ಸಿ. ಇ. ಓ. ಕೆ. ಟಿ. ವಿಶ್ವನಾಥ, ಜಿ. ಎಂ ಚಂದ್ರಶೇಖರ ಮೇರ್ಕಜೆ ಉಪಸ್ಥಿತ ರಿದ್ದರು.










