ಐವರ್ನಾಡು ಗ್ರಾಮದ ಕುತ್ಯಾಡಿ ಚೆಮ್ನೂರು ಬಾಂಜಿಕೋಡಿ ಸಂಪರ್ಕ ರಸ್ತೆಗೆ ಕುತ್ಯಾಡಿ ಎಂಬಲ್ಲಿ ರಸ್ತೆ ಕಾಂಕ್ರಿಟೀಕರಣಕ್ಕೆ ಗುದ್ದಲಿ ಪೂಜೆಯು ಸೆ.04 ರಂದು ನಡೆಯಿತು.
















ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವ್ಯ.ಸ.ಮಾಜಿ ಅಧ್ಯಕ್ಷ ಶಿವಪ್ಪ ಗೌಡ ನೆಕ್ಕರೆಕಜೆಯವರು ತೆಂಗಿನಕಾಯಿ ಒಡೆಯುವ ಮೂಲಕ ಗುದ್ದಲಿ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಐವರ್ನಾಡು ಸಹಕಾರಿ ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥ, ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಲೀಲಾವತಿ ಕುತ್ಯಾಡಿ ,ಉಪಾಧ್ಯಕ್ಷ ಬಾಲಕೃಷ್ಣ ಕೀಲಾಡಿ,ಗ್ರಾಮ ಪಂಚಾಯತ್ ಸದಸ್ಯ ರಂಜನ್ ಮೂಲೆತೋಟ, ಶ್ರೀನಿವಾಸ ಭಟ್ ಬಾಂಜಿಕೋಡಿ,ಮಂಜುನಾಥ ಮಡ್ತಿಲ,ಪ್ರಭಾಕರ ಕುತ್ಯಾಡಿ,ಪ್ರಜ್ವಲ್ ಕೊಯಿಲ ಮತ್ತಿತರರು ಉಪಸ್ಥಿತರಿದ್ದರು.
ಗ್ರಾಮ ಪಂಚಾಯತ್ ಪಿಡಿಒ ಶ್ಯಾಮ್ ಪ್ರಸಾದ್ ಸ್ವಾಗತಿಸಿ,ವಂದಿಸಿದರು.










