ಸುಬ್ರಹ್ಮಣ್ಯದಲ್ಲಿ 55ನೇ ವರ್ಷದ ಶ್ರೀ ಗಣೇಶೋತ್ಸವ, ಏಳು ದಿನಗಳ ಬಳಿಕ ಸಮಾಪ್ತಿ

0

ಅದ್ದೂರಿಯಾಗಿ ಸಾಗಿದ ಶೋಭಾಯಾತ್ರೆ, ಸಾವಿರಾರು ಮಂದಿ ಭಾಗಿ

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಸುಬ್ರಹ್ಮಣ್ಯ ವತಿಯಿಂದ 55ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಆ.27 ರಿಂದ ಆರಂಭವಾಗಿ ಸೆ‌.2 ರ ವರಗೆ ವಿವಿಧ ಕಾರ್ಯಕ್ರಮಗಳ ಬಳಿಕ ಸಮಾಪ್ತಿಯಾಯಿತು.

ಸೆ.2 ರಂದು ಸರ್ವಾಲಕೃತ ರಥದಲ್ಲಿ ಬೆಳ್ಳಿಯ ನೂತನ ಪ್ರಭಾವಳಿಯೊಂದಿಗೆ ಶ್ರೀ ಮಹಾಗಣಪತಿ ಶೋಭಾಯಾತ್ರೆ ಸ್ತಬ್ದ ಚಿತ್ರ, ಬ್ಯಾಂಡ್ ವಾದ್ಯ, ಕೇರಳ ಚೆಂಡೆ, ವಿವಿಧ ರೀತಿಯ ಟ್ಯಾಬ್ಲೋಗಳಿದ್ದು, ಕುಣಿತ ಭಜನೆಯೊಂದಿಗೆ ಆಕರ್ಷಕವಾಗಿ ಸಾಗಿತು. ಬಳಿಕ ಕುಮಾರಧಾರದಲ್ಲಿ ಶ್ರೀ ಗಣಪತಿಯ ಜಲಸ್ತಂಭನ ನೆರವೇರಿತು.ಮೆರವಣಿಗೆಯುದ್ದಕ್ಕೂ ಸಾವಿರಾರು ಮಂದಿ ಭಕ್ತರು ಭಾಗವಹಿಸಿದ್ದರು.