ಅಜ್ಞಾನದ ಕತ್ತಲೆ ಕಳೆದು ಸುಜ್ಞಾನದ ಕಡೆಗೆ ಕರೆದುಕೊಂಡು ಹೋಗುವ ಶಕ್ತಿಯೇ ಗುರು : ಅರುಣ್ ಕುಮಾರ್
ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ ಶಿಕ್ಷಕರ ದಿನಾಚರಣೆ, ಓಣಂ ಮತ್ತು ಈದ್ ಮಿಲಾದ್ ಆಚರಣೆಯನ್ನು ಸೆ.4ರಂದು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮಕ್ಕೆ ಶಾಲಾ ಸಂಚಾಲಕ ಡಾ. ರೇಣುಕಾ ಪ್ರಸಾದ್ ಕೆ.ವಿ ಶುಭ ಹಾರೈಸಿದರು.

ಶಾಲಾ ಪ್ರಾಂಶುಪಾಲ ಅರಣ್ ಕುಮಾರ್ ಮಾತನಾಡಿ “ಅಜ್ಞಾನದ ಕತ್ತಲೆ ಕಳೆದು ಸುಜ್ಞಾನದ ಕಡೆಗೆ ಕರೆದುಕೊಂಡು ಹೋಗುವ ಶಕ್ತಿಯೇ ಗುರು. ಶಿಕ್ಷಕರು ಜ್ಞಾನದ ಬೆಳಕು ಆಗಿರುತ್ತಾರೆ ” ಎಂದು ಶಿಕ್ಷಕ ವೃಂದದವರಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕೆವಿಜಿ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಕಮಿಟಿ ‘ಬಿ’ ವಿಭಾಗದ ನಿರ್ದೇಶಕಿ ಡಾ. ಜ್ಯೋತಿ ಆರ್ ಪ್ರಸಾದ್ ಶಾಲಾ ಪ್ರಾಂಶುಪಾಲ, ಉಪ ಪ್ರಾಂಶುಪಾಲೆ ಮತ್ತು ಎಲ್ಲಾ ಶಿಕ್ಷಕರ ಜೊತೆ ಕೇಕ್ ಕತ್ತರಿಸಿ ಸಂಭ್ರಮದಿಂದ ಎಲ್ಲರಿಗೂ ಶುಭ ಹಾರೈಸಿದರು.
ಶಿಕ್ಷಕರ ದಿನಾಚರಣೆಯ ಮಹತ್ವದ ಕುರಿತು ಸ್ಪಂದನ ಮತ್ತು ತೃಪ್ತಿ ಮಾತನಾಡಿದರು.















ಓಣಂ ಆಚರಣೆಯ ಮಹತ್ವದ ಕುರಿತು ಸೀಮಾ ಮತ್ತು ಈದ್ ಮಿಲಾದ್ ಆಚರಣೆಯ ಮಹತ್ವದ ಬಗ್ಗೆ ದ್ವಿತ ರಂಜನ್ ಮತ್ತು ಜನ್ಯ ಮಾತನಾಡಿದರು.
ಈ ಸಂದರ್ಭದಲ್ಲಿ ಸುಳ್ಯ ತಾಲೂಕು ದಸರಾ ಕ್ರೀಡಾಕೂಟದ ಪ್ರಯುಕ್ತ ಆಯೋಜಿಸಲಾದ ಯೋಗಾಸನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಐದನೇ ತರಗತಿಯ ವಿದ್ಯಾರ್ಥಿನಿ ಅದಿತಿಯನ್ನು ಅಭಿನಂದಿಸಲಾಯಿತು.
7, 8 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈವಿಧ್ಯ ನಡೆಯಿತು. ಶಿಕ್ಷಕಿಯರಾದ ಶ್ರೀಮತಿ ಪ್ರಜ್ಞಾ, ಶ್ರೀಮತಿ ರೇಣುಕಾ ಉತ್ತಪ್ಪ, ಶ್ರೀಮತಿ ಶೋಭಾ ಕಲ್ಲಾಜೆ ಮತ್ತು ಶ್ರೀಮತಿ ಧನ್ಯ. ಕೆ ಸಹಕರಿಸಿದರು. ವಿದ್ಯಾರ್ಥಿಗಳು ಶಿಕ್ಷಕರಿಗಾಗಿ ಹಲವು ಮನರಂಜನಾ ಸ್ಪರ್ಧೆಗಳನ್ನು ಏರ್ಪಡಿಸಿದರು.
ಕಾರ್ಯಕ್ರಮದಲ್ಲಿ ಕೆವಿಜಿ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಕಮಿಟಿ’ ಬಿ’ವಿಭಾಗದ ಆಡಳಿತಾಧಿಕಾರಿ ಭವಾನಿ ಶಂಕರ್ ಅಡ್ತಲೆ, ಕೆವಿಜಿ ಅಮರ ಜ್ಯೋತಿ ಪಿಯು ಕಾಲೇಜಿನ ಪ್ರಾಂಶುಪಾಲೆ
ಡಾ. ಯಶೋದಾ ರಾಮಚಂದ್ರ, ಕೆವಿಜಿ ಐಪಿಎಸ್ ನ ಉಪ ಪ್ರಾಂಶುಪಾಲೆ ಶಿಲ್ಪಾಬಿದ್ದಪ್ಪ ಶಿಕ್ಷಕ, ಶಿಕ್ಷಕೇತರ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸೀಮಾ ಆಯಿಷ, ನಿದಾ ಫಾತಿಮಾ, ಸ್ಕಂದ ದಿಯಾ ಕಲ್ಲಾಜೆ ಮತ್ತು ಶ್ರದ್ಧಾ ಪೈ ನಿರೂಪಿಸಿದರು.










