ಸುಳ್ಯ : ಪಯಸ್ವಿನಿ ಸ್ತ್ರೀಶಕ್ತಿ ಮಹಿಳಾ ವಿವಿಧೋದ್ದೇಶ ಸಹಕಾರ ಸಂಘದ ಮಹಾಸಭೆ

0

ಪಯಸ್ವಿನಿ ಸ್ತ್ರೀಶಕ್ತಿ ಮಹಿಳಾ ವಿವಿದೋದ್ದೇಶ ಸಹಕಾರ ಸಂಘದ ವಾರ್ಷಿಕ ಮಹಾಸಭೆಯು ಸೆ.04 ಸಂಘದ ಅಧ್ಯಕ್ಷೆ ಶ್ರೀಮತಿ ಉಷಾ ಜಯರಾಮರವರ ಅಧ್ಯಕ್ಷತೆಯಲ್ಲಿ ಸುಳ್ಯದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ಸಂಘದ ನಿರ್ದೇಶಕಿ ನಿರ್ಮಲ ಯಂ.ಆಡಳಿತ ವರದಿ ಮಂಡಿಸಿದರು.
ಪ್ರಭಾರ ಮುಖ್ಯಕಾರ್ಯನಿರ್ವಹಣಾಧಿಕಾರಿ ಕವಿತರವರು ಆಡಿಟ್ ವರದಿ ಮಂಡಿಸಿದರು.
ಹಿಂದಿನ ಸಾಲಿನ ಆಡಳಿತ ವರದಿಯನ್ನು ನಿರ್ದೇಶಕಿ ಶ್ರೀಮತಿ ಹರ್ಷಿಣಿ ಕುಮಾರಿ ಮಂಡಿಸಿದರು.


ಸಂಘದ ಅಧ್ಯಕ್ಷೆ ಶ್ರೀಮತಿ ಉಷಾ ಜಯರಾಮರವರು ಮಾತನಾಡಿ ಸಂಘವು ವರದಿ ವರ್ಷದಲ್ಲಿ ರೂ.78 ಲಕ್ಷಕ್ಕೂ ಮೀರಿ ವ್ಯವಹಾರ ನಡೆಸಿ ರೂ.12,801 ರೂ.ಲಾಭ ಗಳಿಸಿರುತ್ತದೆ ಎಂದು ಹೇಳಿದರು.
ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.


ಸಂಘದ ಆರ್ಥಿಕ ತಜ್ಞರಾದ ಪಿ.ಸಿ.ಜಯರಾಮ ಮಡಪ್ಪಾಡಿ,ಕಾನೂನು ಸಲಹೆಗಾರರಾದ ದಿನೇಶ್ ಅಂಬೆಕಲ್ಲು,ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ,ಎನ್.ಆರ್.ಎಲ್.ಎಂ.ನ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕಿ ಶ್ರೀಮತಿ ಶ್ವೇತಾರವರು ಮಾಹಿತಿ ನೀಡಿದರು.
ವೇದಿಕೆಯಲ್ಲಿ ಉಪಾಧ್ಯಕ್ಷೆ ಶ್ರೀಮತಿ ಲತಾ ಕುಮಾರಿ,ಶ್ರೀಮತಿ ನಿರ್ಮಲ ಎಂ, ಶ್ರೀಮತಿ ನಳಿನಿ ಜಿ, ಶ್ರೀಮತಿ ಸರಸ್ವತಿ ಸಿ.ಕೆ,ಶ್ರೀಮತಿ ಪ್ರೇಮಾ ಕನಕಮಜಲು,ಶ್ರೀಮತಿ ಸುಲೋಚನಾ ದೇವ,ಶ್ರೀಮತಿ ಪಾರ್ವತಿ ಐವರ್ನಾಡು,ಶ್ರೀಮತಿ ಸಂಧ್ಯಾ ಟಿ.ಕೆ, ಶ್ರೀಮತಿ ವನಜಾ ಎಸ್.ರೈ ಕೇನ್ಯ,ಶ್ರೀಮತಿ ರೇವತಿ ಪಿ, ಶ್ರೀಮತಿ ಹರ್ಷಿಣಿ ಕುಮಾರಿ,ಶ್ರೀಮತಿ ಪವಿತ ಡಿ.ಸಿ ಉಪಸ್ಥಿತರಿದ್ದರು.
ಉಪಾಧ್ಯಕ್ಷೆ ಲತಾ ಕುಮಾರಿ ವಂದಿಸಿದರು.