














ಸ್ನೇಹಿತರ ಕಲಾ ಸಂಘ ಬೆಳ್ಳಾರೆ ಇದರ ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ಗುರುವಂದನ ಕಾರ್ಯಕ್ರಮ ಸೆ. 5ರಂದು ನಡೆಯಿತು.
ನಿವೃತ್ತ ಶಿಕ್ಷಕ ಉಮಿಕ್ಕಳ ಲವ ಕೆ ಇವರ ಮನೆಗೆ ತೆರಳಿ ಗುರುವಂದನಾ ಪತ್ರದೊಂದಿಗೆ ಸನ್ಮಾನಿಸಿ, ಗೌರವಾರ್ಪಣೆಯನ್ನು ಸಮರ್ಪಿಸಿ, ಸಂಘದ ಸದಸ್ಯರು, ಹಿತೈಷಿಗಳು ಗುರುಗಳ ಆಶೀರ್ವಾದವನ್ನು ಪಡೆದರು. ಸ್ನೇಹಿತರ ಕಲಾಸಂಘದ ಉಪಾಧ್ಯಕ್ಷ ವಸಂತ ಗೌಡ ಪಡ್ಪು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಗಣೇಶ್ ಪಾಟಾಲಿ ಕುರುಂಬುಡೇಲು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೋಶಾಧಿಕಾರಿ ಶ್ರೀನಿವಾಸ ಕುರುಂಬುಡೇಲು ಗುರುವಂದನಾ ಪತ್ರವನ್ನು ವಾಚಿಸಿದರು. ಪೂರ್ವಾಧ್ಯಕ್ಷ ಚಂದ್ರಶೇಖರ ಪನ್ನೆ ಸ್ವಾಗತಿಸಿ, ಪೂರ್ವಾಧ್ಯಕ್ಷರಾದ ಸಂಜಯ್ ನೆಟ್ಟಾರು ಪ್ರಾಸ್ತಾವಿಕ ಮಾತುಗಳನಾಡಿ, ನಿಕಟ ಪೂರ್ವಧ್ಯಕ್ಷ ವಸಂತ ಉಲ್ಲಾಸ್ ವಂದಿಸಿದರು. ಪೂರ್ವಧ್ಯಕ್ಷ ಕೊರಗಪ್ಪ ಕುರುಂಬುಡೇಲು ಕಾರ್ಯಕ್ರಮ ನಿರೂಪಿಸಿದರು.










