














ಸುಳ್ಯ ದಸರಾ -೨೦೨೫ ಈ ವರ್ಷ ಅದ್ಧೂರಿಯಾಗಿಯಾಗಿ ಆಚರಿಸಲು ತೀರ್ಮಾನಿಸಿದ್ದು, ಇದೇ ತಿಂಗಳ ೨೯ರಿಂದ ಆರಂಭವಾಗಲಿದೆ. ಆ ಪ್ರಯುಕ್ತ ಆಮಂತ್ರಣ ಪತ್ರಿಕೆ ಮುದ್ರಿಸಲಾಗಿದ್ದು ಇದರ ಬಿಡುಗಡೆ ಕಾರ್ಯಕ್ರಮ ಸೆ. ೬ರಂದು ಬೆಳಿಗ್ಗೆ ಗಂಟೆ ೧೧.೩೦ ಕ್ಕೆ ದಸರಾ ಸಮಿತಿಯ ಅಧ್ಯಕ್ಷರಾದ ಶಾಸಕರು ಕು . ಭಾಗೀರಥಿ ಮುರುಳ್ಯ ಇವರು ಶ್ರೀ ಚೆನ್ನಕೇಶವ ದೇವಾಲದ ಮುಂಭಾಗದಲ್ಲಿ ಬಿಡುಗಡೆಗೊಳಿಸಲಿರುವರು. ಶಾರದಾಂಬಾ ಸಮೂಹ ಸಮಿತಿಯ ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಬೇಕೆಂದು ಸಮಿತಿಯವರು ತಿಳಿಸಿದ್ದಾರೆ.










