ಬೆಳ್ಳಾರೆಯಲ್ಲಿ ಈದ್ ಮಿಲಾದ್ ಪ್ರಯುಕ್ತ ಭ್ರಹತ್ ಮಿಲಾದ್ ರ‍್ಯಾಲಿ

0

ಬೆಳ್ಳಾರೆ: ಝಖರಿಯ್ಯಾ ಜುಮಾ ಮಸ್ಜಿದ್, ಹಿದಾಯತುಲ್ ಇಸ್ಲಾಂ ಸೆಕಂಡರಿ ಮದ್ರಸ, ಹಿದಾಯ ಅರೇಬಿಕ್ ಮದ್ರಸ, ಬಹ್ಜತು ತ್ವಲಬಾ ದರ್ಸ್ ಬೆಳ್ಳಾರೆ ಇವುಗಳ ಸಂಯುಕ್ತ ಆಶ್ರಯದಲ್ಲಿ ದಾರುಲ್ ಹಿಕ್ಮಾ ಇಸ್ಲಾಮಿಕ್ ಸೆಂಟರ್, ಹಾಗೂ ದಾರುಲ್ ಹುದಾ ತಂಬಿನಮಕ್ಕಿ ಸಹಯೋಗದೊಂದಿಗೆ ಬೆಳ್ಳಾರೆ ಜಮಾಅತ್ ಅಧ್ಯಕ್ಷರಾದ ಯು.ಎಚ್ ಅಬೂಬಕ್ಕರ್ ರವರ ನೇತೃತ್ವದಲ್ಲಿ ಭ್ರಹತ್ ಮಿಲಾದ್ ರ‍್ಯಾಲಿ ಇಂದು ಜರುಗಿತು.


ಬೆಳ್ಳಾರೆ ಹಿದಾಯತುಲ್ ಇಸ್ಲಾಂ ಮದ್ರಸ ವಿದ್ಯಾರ್ಥಿಗಳ ಸ್ಕೌಟ್ ಹಾಗೂ ದಫ್ ತಂಡದೊಂದಿಗೆ ದಾರುಲ್ ಹಿಕ್ಮ, ಬೆಳ್ಳಾರೆ ದರ್ಸ್ ಹಾಗೂ ದಾರುಲ್ ಹುದಾ ಸಂಸ್ಥೆಯ ವಿದ್ಯಾರ್ಥಿಗಳು, ಬೆಳ್ಳಾರೆ ಹಾಗೂ ತಂಬಿನಮಕ್ಕಿ ಜಮಾಅತ್ ಅಧ್ಯಕ್ಷರು ಪದಾಧಿಕಾರಿಗಳು, ಜಮಾಅತರು ಹಲವು ಸಂಘಸಂಸ್ಥೆಗಳ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.


ಬೆಳ್ಳಾರೆ ಮಸೀದಿ ಮುದರ್ರಿಸರಾದ ಬಹು ನಸೀಹ್ ದಾರಿಮಿ ಹಾಗೂ ದಾರುಲ್ ಹುದಾ ತಂಬಿನಮಕ್ಕಿ ಮ್ಯಾನೇಜರ್ ಖಲೀಲ್ ಹಿಮಮಿ ಸಂದೇಶ ಭಾಷಣ ಮಾಡಿದರು. ಬೆಳ್ಳಾರೆ ಮದ್ರಸ ಸದರ್ ಮುಅಲ್ಲಿಮ್ ಬಹು ಮುಹಮ್ಮದ್ ಮುಸ್ಲಿಯಾರ್ ಕಾರ್ಯಕ್ರಮ ನಿರ್ವಹಿಸಿದರು.
ಬೆಳ್ಳಾರೆ ಟೌನ್ ಬಾಯ್ಸ್ ಕಾರ್ಯಕರ್ತರು ಸಹಕರಿಸಿದರು.