ಸೆ.14 : ಬೆಳ್ಳಾರೆಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣೆ,ಗುರುಪೂಜೆ,ಪ್ರತಿಭಾ ಪುರಸ್ಕಾರ,ಸನ್ಮಾನ

0

ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಸುಳ್ಯ,ಯುವವಾಹಿನಿ ಸುಳ್ಯ ಘಟಕ ವತಿಯಿಂದ 171 ನೇ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣೆ,ಗುರುಪೂಜೆ,ಪ್ರತಿಭಾ ಪುರಸ್ಕಾರ,ಸನ್ಮಾನ ಕಾರ್ಯಕ್ರಮವು ಸೆ.14 ರಂದು ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಲಿದೆ.
ಪುರೋಹಿತರಾದ ಪಿ.ಡಿ.ಹರೀಶ ಶಾಂತಿ ಪುತ್ತೂರು ಇವರ ನೇತೃತ್ವದಲ್ಲಿ ಗುರುಪೂಜೆ ನಡೆಯಲಿದೆ.
ಪೂರ್ವಾಹ್ನ ಗಂಟೆ 8.30 ರಿಂದ ಬಿಲ್ಲವ ಮಹಿಳಾ ಘಟಕ ಬೆಳ್ಳಾರೆ ಇವರಿಂದ ಭಜನಾ ಸಂಕೀರ್ತನೆ,9.30 ರಿಂದ ಗುರುಪೂಜೆ,10.00 ರಿಂದ ಸಭಾ ಕಾರ್ಯಕ್ರಮ,ಸಾಧಕರಿಗೆ ಸನ್ಮಾನ,ಪ್ರತಿಭಾನ್ವಿತರಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ.
ಬ್ರಹ್ಮ ಶ್ರೀ ನಾರಾಯಣಗುರು ಬಿಲ್ಲವ ಸಂಘದ ಅಧ್ಯಕ್ಷ ಎ.ಕೃಷ್ಣಕುಮಾರ್ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಜನಪದ ಚಿಂತಕರಾದ ಶೈಲು ಬಿರ್ವ ದೋಲ ಬಾರಿಕೆ ಇವರು ಗುರುಸಂದೇಶ ನೀಡಲಿದ್ದಾರೆ.
ಭಾ.ಜ.ಪಾ.ಜಿಲ್ಲಾ ಅಧ್ಯಕ್ಷ ಸತೀಶ್ ಕುಂಪಲ,ಸುಳ್ಯ ಪೊಲೀಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ಶ್ರೀಮತಿ ಸರಸ್ವತಿ ಅತಿಥಿಗಳಾಗಿ ಉಪಸ್ಥಿತರಿರುವರು.
ಸನ್ಮಾನ
ನಿವೃತ್ತ ಪಿಡಿಒ ಜಯಪ್ರಕಾಶ್ ಅಲೆಕ್ಕಾಡಿ,ನಿವೃತ್ತ ಕ್ಯಾಂಪ್ಕೋ ಅಧಿಕಾರಿ ರಾಘವ ಪೂಜಾರಿ ಸಾರಕರೆ,ಆಯುರ್ವೇದ ವೈದ್ಯಕೀಯ ಕ್ಷೇತ್ರದ ಡಾ.ರೂಪಾ ವಿಠಲದಾಸ್ ಬೆಳ್ಳಾರೆಯವರನ್ನು ಸನ್ಮಾನಿಸಲಾಗುವುದು.
ಗೌರವಾರ್ಪಣೆ
ಬೆಳ್ಳಾರೆ ರೋಟರಿ ಕ್ಲಬ್ ಅಧ್ಯಕ್ಷ ,ವಾಸ್ತು ರಚನಾ ಕನ್ ಸ್ಟ್ರಕ್ಷನ್ ನ ವಿಶ್ವನಾಥ ಪೂಜಾರಿ ಕೊಳಂಬಳ, ಕುಂದಾಪುರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ಶ್ರೀಮತಿ ರಶ್ಮಿತಾ ಕರ್ಕೇರಾ ಎನ್, ಕಾಣಿಯೂರು ಬ್ಯಾಂಕ್ ಆಫ್ ಬರೋಡಾದ ಶ್ರೀಮತಿ ಅಕ್ಷತಾ ಎಂ.
ಮತ್ತು 2024-25 ನೇ ಸಾಲಿನ 10 ನೇ ತರಗತಿಯಲ್ಲಿ ರಾಜ್ಯದಲ್ಲಿ 6 ನೇ ರ್ಯಾಂಕ್ ಪಡೆದ ಕು.ಅಪೇಕ್ಷಾ ಅಲೆಕ್ಕಾಡಿಯವರನ್ನು ಗೌರವಿಸಲಾಗುವುದು.
2024 -25 ನೇ ಸಾಲಿನ ಶೇ.90 ಕ್ಕಿಂತ ಅಧಿಕ ಅಂಕ ಪಡೆದ ದ್ವಿತೀಯ ಪಿಯುಸಿ ಹಾಗೂ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ ಎಂದು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ಅಧ್ಯಕ್ಷ ಎ.ಕೃಷ್ಣಕುಮಾರ್ ಹಾಗೂ ಕಾರ್ಯದರ್ಶಿ ನವೀನ್ ಕುಮಾರ್ ಸಾರಕರೆ ತಿಳಿಸಿದ್ದಾರೆ.