ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಿವೃತ್ತ ಹಿರಿಯ ಶಿಕ್ಷಕ ಸಾಹಿತಿ ಕಲಾವಿದರಿಗೆ ಸನ್ಮಾನ

0

ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತ್ ಕಳೆದೆರಡು ವರ್ಷಗಳಿಂದ ಶಿಕ್ಷಕರ ದಿನಾಚರಣೆಯಂದು ಶಿಕ್ಷಣ, ಕಲೆ, ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡು ನಿವೃತ್ತರಾದ ಹಿರಿಯ ಶಿಕ್ಷಕರನ್ನು ಗುರುತಿಸಿ ಗೌರವಿಸುವ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಅದರಂತೆ ಇಂದು ಸೆ.5 ರಂದು ಇಬ್ಬರು ಹಿರಿಯ ನಿವೃತ್ತ ಶಿಕ್ಷಕ ಸಾಹಿತಿ ಕಲಾವಿದರನ್ನು ಅವರ ನಿವಾಸದಲ್ಲಿ ಗೌರವಿಸಿ ಸನ್ಮಾನಿಸಲಾಯಿತು.

ಪೂರ್ವಾಹ್ನ 8.30ಗಂಟೆಗೆ ಜಿಜ್ಞಾಸು ಎಂಬ ಕಾವ್ಯ ನಾಮದಿಂದ ಗುರುತಿಸಿ ಕೊಂಡಿರುವ ಶ್ರೀ. ಆರ್.ಕೆ ಭಾಸ್ಕರ ಬಾಳಿಲ, ನಿವೃತ್ತ ಮುಖ್ಯ ಶಿಕ್ಷಕರು ಹಾಗೂ ನಾಟಕ ಕಲಾವಿದರಾಗಿ ಶಿಕ್ಷಣ ಕ್ಷೇತ್ರದಲ್ಲಿ ಅಪೂರ್ವ ಸಾಧನೆ ಮಾಡುವುದರೊಂದಿಗೆ ನಾಟಕ, ಚಿತ್ರಕಲೆ, ವರ್ಲಿ ಆರ್ಟ್, ಹಾಗೂ ಸಾಂಸ್ಕೃತಿಕ ರಂಗದಲ್ಲಿ ತೊಡಗಿಸಿಕೊಂಡಿರುವ ಇವರನ್ನು ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಚಂದ್ರಶೇಖರ್ ಪೇರಾಲ್, ಸುಳ್ಯ ಹೋಬಳಿ ಘಟಕದ ಅಧ್ಯಕ್ಷರಾದ ಚಂದ್ರಾವತಿ ಬಡ್ಡಡ್ಕ, ಪಂಜ ಹೋಬಳಿ ಘಟಕದ ಅಧ್ಯಕ್ಷರಾದ ಬಾಬು ಗೌಡ ಅಚ್ರಪ್ಪಾಡಿ, ಜಿಲ್ಲಾ ಪ್ರತಿನಿಧಿ ರಾಮಚಂದ್ರ ಪಲ್ಲತ್ತಡ್ಕ, ಕಸಾಪ ಕಾರ್ಯದರ್ಶಿ ತೇಜಸ್ವಿ ಕಡಪಳ, ಕಾರ್ಯಕಾರಿ ಸಮಿತಿ ಸದಸ್ಯರಾದ ಕೇಶವ ಸಿ.ಎ., ಲತಾಶ್ರೀ ಸುಪ್ರೀತ್ ಮೋಂಟಡ್ಕ, ಪ್ರಮುಖರಾದ ಸಿ. ಎ. ಗಣೇಶ್ ಭಟ್, ಸುಹಾಸ್, ಕೆ.ವಿ. ಶರ್ಮ ದಂಪತಿಗಳು ಬಾಳಿಲ, ಕರುಣಾಕರ ಶೆಟ್ಟಿ ನಾಲ್ಗುತ್ತು, ರವೀಂದ್ರ ರೈ ಟಪ್ಪಾಲುಕಟ್ಟೆ, ರಮೇಶ್ ರೈ ಅಗಲ್ಪಾಡಿ, ಗೌತಮ್ ಕಾಂಚೋಡು, ರಾಜೀವಿ, ಜಯರಾಮ್ ರೈ, ಹರೀಶ್ ರೈ, ಶ್ರೀಮತಿ. ಶಶಿಕಲಾ ಭಾಸ್ಕರ ಬಾಳಿಲ ಉಪಸ್ಥಿತರಿದ್ದರು.

ಹಾಗೂ ಸಂಜೆ ಯಕ್ಷಗಾನ ಕಲಾವಿದರಾಗಿ ಶಿಕ್ಷಣ ಕ್ಷೇತ್ರದಲ್ಲಿ ಅಪೂರ್ವ ಸಾಧನೆಗೈಯುವುದರೊಂದಿಗೆ ವಿದ್ಯಾರ್ಥಿಗಳಿಗೆ ಯಕ್ಷಗಾನ, ಸಂಗೀತ, ನೃತ್ಯಗಳನ್ನು ಕಲಿಸಿ ಜನಮನ್ನಣೆ ಗಳಿಸಿದ ಹಿರಿಯ ಶಿಕ್ಷಕರಾದ ಶ್ರೀಮತಿ. ಕಲಾವತಿ ಅಟ್ಲೂರು ಅವರನ್ನು ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತ್ ನ ವತಿಯಿಂದ ಗೌರವಿಸಲಾಯಿತು‌.
ಈ ಸಂದರ್ಭದಲ್ಲಿ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಚಂದ್ರಶೇಖರ್ ಪೇರಾಲ್, ಸುಳ್ಯ ಹೋಬಳಿ ಘಟಕದ ಅಧ್ಯಕ್ಷರಾದ ಚಂದ್ರಾವತಿ ಬಡ್ಡಡ್ಕ, ಜಿಲ್ಲಾ ಪ್ರತಿನಿಧಿ ರಾಮಚಂದ್ರ ಪಲ್ಲತ್ತಡ್ಕ, ಕಸಾಪ ಕಾರ್ಯದರ್ಶಿಗಳಾದ ತೇಜಸ್ವಿ ಕಡಪಳ, ಚಂದ್ರಮತಿ ಕೆ, ಕಾರ್ಯಕಾರಿ ಸಮಿತಿ ಸದಸ್ಯರಾದ ಕೇಶವ ಸಿ.ಎ., ಲತಾಶ್ರೀ ಸುಪ್ರೀತ್, ಸ್ಥಳೀಯರಾದ ದೇವಿಪ್ರಸಾದ್ ಅತ್ಯಾಡಿ, ಸುಪುತ್ರ ರವಿಪ್ರಕಾಶ್ ಅಟ್ಲೂರು, ಪುತ್ರಿ, ಸೊಸೆ,
ಉಪಸ್ಥಿತರಿದ್ದರು.