ಅಂಜಲಿ ಮಾಂಟೆಸ್ಸರಿ ಸ್ಕೂಲ್ ನಲ್ಲಿ ಶಿಕ್ಷಕರ ದಿನಾಚರಣೆ ಹಾಗೂ ಈದ್ ಮಿಲಾದ್ ಹಬ್ಬದ ಆಚರಣೆ ಮಾಡಲಾಯಿತು.
ಪುಟಾಣಿಗಳೆಲ್ಲರು ಸೇರಿ ಶಿಕ್ಷಕರೆಲ್ಲರನ್ನು ಪ್ರೀತಿಯಿಂದ ಬರಮಾಡಿಕೊಂಡರು.















ಪುಟಾಣಿಗಳೆಲ್ಲರೂ ಶಿಕ್ಷಕರಿಗೆ ಉಡುಗೊರೆ ನೀಡಿ ಶಿಕ್ಷಕರ ದಿನಾಚರಣೆಯ ಶುಭ ಹಾರೈಸಿದರು.
ಪುಟಾಣಿ ಮಕ್ಕಳು ಶಿಕ್ಷಕರ ಕುರಿತು ಮುದ್ದು ಮುದ್ದಾಗಿ ಮಾತನಾಡಿದರು . ಕೆಲವು ಪುಟಾಣಿಗಳು ನೃತ್ಯ ಹಾಗೂ ಹಾಡಿನ ಮೂಲಕ ಮನರಂಜಿಸಿದರು.
ಯು.ಕೆ.ಜಿ ವಿದ್ಯಾರ್ಥಿಗಳಾದ ರುತ್ವಿಕ ಸ್ವಾಗತಿಸಿ , ಐರಾ ವಂದಿಸಿ , ಆಯಿಷಾ ಶಝ್ನಾ ಕಾರ್ಯಕ್ರಮವನ್ನು ನಿರೂಪಿಸಿದರು.










