
ಕೃಷಿ ಇಲಾಖೆ ಸುಳ್ಯ ಇದರ ವತಿಯಿಂದ ಎಡಮಂಗಲ ಹಾಲು ಉತ್ಪಾದಕರ ಸಹಕಾರ ಸಂಘದ ಸಹಕಾರದೊಂದಿಗೆ 2024- 25 ನೇ ಸಾಲಿನ ಎ ಟಿ ಎಮ್ ಎ ಯೋಜನೆ ಅಡಿಯಲ್ಲಿ ಕಿಸಾನ್ ಗೋಷ್ಠಿ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಸೆ. 6ರಂದು ಎಡಮಂಗಲದ ಶಿವ ಪಾರ್ವತಿ ಭವನದಲ್ಲಿ ನಡೆಯಿತು. ಶಾಸಕಿ ಕು. ಭಾಗೀರಥಿ ಮುರುಳ್ಯ ರವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.
















ವೇದಿಕೆಯಲ್ಲಿ ಎಡಮಂಗಲ ಗ್ರಾಮ ಪಂಚಾಯತ್ ಅಧ್ಯಕ್ಷ ರಾಮಣ್ಣ ಜಾಲ್ತಾರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಎಡಮಂಗಲ ಹಾಲು ಸೊಸೈಟಿ ಅಧ್ಯಕ್ಷ ದಾಮೋದರ ಗೌಡ ಲೆಕ್ಕಿಸಿರಿಮಜಲು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಾಮಕೃಷ್ಣ ರೈ ಮಾಲೆಂಗಿರಿ, ಮಂಗಳೂರು ಕೆ ಎಮ್ ಎಫ್ ವಿಸ್ತರಣಾಧಿಕಾರಿ ಹರೀಶ್ ಕುಮಾರ್ ಎಮ್.ಎಸ್, ದಕ್ಷಿಣ ಕನ್ನಡ ಜಂಟಿ ಕೃಷಿ ನಿರ್ದೇಶಕ ಹೊನ್ನಪ್ಪ ಗೌಡ, ಪುತ್ತೂರು ಉಪ ವಿಭಾಗದ ಉಪ ಕೃಷಿ ನಿರ್ದೇಶಕರಾದ ಶಿವಶಂಕರ ದಾನೆ ಗೊಂಡರ್, ಹಿರಿಯ ವಿಜ್ಞಾನಿ ನಾಗರಾಜ್, ನಿಂತಿಕಲ್ಲು ಶ್ರೀದೇವಿ ಅಗ್ರಿಟೆಕ್ ಸಂಸ್ಥೆ ಮಾಲಕ ತಿಮ್ಮಪ್ಪ ರೈ ತೋಟಗಾರಿಕೆ ಇಲಾಖೆಯ ವಿಜೇತ್ ಎಸ್. ಉಪಸ್ಥಿತರಿದ್ದರು.


ಕೃಷಿ ಕ್ಷೇತ್ರ ದಲ್ಲಿ ಸಾಧನೆ ಮಾಡಿದ ಎಡಮಂಗಲದ ದೇವರ ಮಜಲು ಅವಿನಾಶ್ ಡಿ ಮತ್ತು ಆಳಕ್ಕೆ ಕಮಲಾಕ್ಷಿ ,ನಿಂತಿಕಲ್ಲು ತಿಮ್ಮಪ್ಪ ರೈ ಸೇರಿದಂತೆ ಸುಮಾರ್ ೨೪ ಸಾಧಕ ಜನರನ್ನು ಗುರುತಿಸಿ ಶಾಲು ಫಲ ಪುಷ್ಪ, ಹಾರ ಹಾಕಿ ಸನ್ಮಾನ ಮಾಡಲಾಯಿತು ಈ ಸಂದರ್ಭದಲ್ಲಿ ಕು. ಭಾಗೀರಥಿ ಮುರುಳ್ಯ ರವರನ್ನು ಸನ್ಮಾನಿಸಲಾಯಿತು. ನಿವೃತ್ತ ಮುಖ್ಯ ಶಿಕ್ಷಕ ಬಾಲಕೃಷ್ಣ ಕೆ. ಹೇಮಳ ಕಾರ್ಯಕ್ರಮ ನಿರೂಪಿಸಿದರು
(ವರದಿ: ಸಂಕಪ್ಪ ಸಾಲಿಯಾನ್ ಅಲೆಕ್ಕಾಡಿ)












