ಮಿಲಾದುನ್ನಬಿ ಕಾರ್ಯಕ್ರಮದ ಹಿನ್ನಲೆ ಆಕರ್ಷಕ ಕಾಲ್ನಡಿಗೆ ಜಾಥಾ, ಮದ್ರಸಾ ನೂತನ ಕೊಠಡಿ ಉದ್ಘಾಟನೆ
ಅಡ್ಕಾರ್ ಮುಹಿಯದ್ದಿನ್ ಜುಮ್ಮಾ ಮಸ್ಜಿದ್ ನಲ್ಲಿ ಸೆ.5 ರಂದು ಮೀಲಾದ್ ಸಂಭ್ರಮ ಹಾಗೂ ನೂತನ ಮದ್ರಸಾ ಕೊಠಡಿ ಉದ್ಘಾಟನೆ ನಡೆಯಿತು.















ಸ್ಥಳೀಯ ಮಸೀದಿ ಕಮಿಟಿ ಅಧ್ಯಕ್ಷ ಅಬ್ದುಲ್ಲಾ ಕುಂಞಿ ರವರು ಧ್ವಜಾರೋಹಣವನ್ನು ನೇರವೇರಿಸಿ ಕಾರ್ಯಕ್ರಮ ಕ್ಕೆ ಚಾಲನೆ ನೀಡಿದರು.

ಬಳಿಕ ವಿದ್ಯಾರ್ಥಿಗಳ ಆಕರ್ಷಕ ದಫ್ ಪ್ರದರ್ಶನ ಮತ್ತು ಪೈಂಗಬರ್ ಸಂದೇಶ ರ್ಯಾಲಿ ನಡೆಯಿತು.
ಈ ಸಂಧರ್ಭದಲ್ಲಿ ನೂತನ ಮದ್ರಸ ಕೊಠಡಿ ಉದ್ಘಾಟನೆ ನಡೆಯಿತು.
ಮೌಲಿದ್ ಪಾರಾಯಣ ಸ್ಥಳೀಯ ಖತೀಬರಾದ ಮುನೀರ್ ಸಅದಿ ಅಲ್ ಹರ್ಷದಿ ನೆಲ್ಲಿಕುನ್ನು ರವರ ನೇತೃತ್ವದಲ್ಲಿ ನಡೆಯಿತು.
ಸಭಾ ಕಾರ್ಯಕ್ರಮ ಹಾಗೂ ಮಕ್ಕಳ ಸಾಂಸ್ಕೃ ತಿಕ ಕಾರ್ಯಕ್ರಮ ಬಹುಮಾನ ವಿತರಣೆ ನಡೆಯಿತು.

ಮಿಲಾದ್ ಸಮಿತಿ ಅಧ್ಯಕ್ಷರಾದ ಮಜೀದ್ ನಡುವಡ್ಕ, ವೈಸ್ ಚೆರ್ಮೆನ್ ಅಬ್ದುಲ್ ರಹಿಮಾನ್ (ಮಡಿಕೇರಿ) ಆಡಳಿತ ಸಮಿತಿ ಪದಾಧಿಕಾರಿಗಳು, ಮದರಸ ಅಧ್ಯಾಪಕರು ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪ್ರಭಾಷಣ ಮತ್ತು ಮೀಲಾದ್ ಸಂದೇಶ ನಡೆಯಿತು. ಕೊನೆಯಲ್ಲಿ ತಬರುಖ್ ವಿತರಣೆ ನಡೆದು ಮೀಲಾದ್ ಜಲ್ಸಾ ಸಮಾರೋಪ ಗೊಂಡಿತು.










