
ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಕ್ಲಬ್ ನ ಸದಸ್ಯರಿಗೆ ಲೀಗ್ ಮಾದರಿಯ ಕೇರಂ ಸ್ಪರ್ಧೆ ಕ್ಲಬ್ ನ ಕೊಠಡಿಯಲ್ಲಿ ಸೆ .7 ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷರಾದ ಹಿತೇಶ್ ಪಂಜದಬೈಲು ವಹಿಸಿದ್ದರು, ಶಿವಾಜಿ ಯುವಕ ಮಂಡಲ(ರಿ.) ಕೂತ್ಕುಂಜ ಇದರ ಅಧ್ಯಕ್ಷರಾದ ಆದರ್ಶ ಚಿದ್ಗಲ್ ಇವರು ದೀಪ ಬೆಳಗಿಸಿ ಉದ್ಘಾಟಿಸಿದರು. ಕ್ಲಬ್ ನ ಕಾರ್ಯದರ್ಶಿಯಾದ ತಾರಾನಾಥ ದಾಸ್ ಇವರು ಸ್ವಾಗತಿಸಿದರು, ನವೀನ್ ನಾಗತೀರ್ಥ ವಂದಿಸಿದರು, ಪವನ್ ಪಲ್ಲತ್ತಡ್ಕ ನಿರೂಪಿಸಿದರು.















ಫಲಿತಾಂಶ: ಅಶೋಕ್ ದೇರಾಜೆ ಮತ್ತು ಪವನ್ ಪಲ್ಲತ್ತಡ್ಕ, ದ್ವಿತೀಯ ಬಹುಮಾನ ಮನು ಕಾರ್ಜ ಮತ್ತು ದುರ್ಗಾಪ್ರಸಾದ್ ಅಂಬೆಕಲ್ಲು ಗಳಿಸಿದರು.










