ಮರ್ಕಂಜ : ಮಂಜುಶ್ರೀ ಪ್ರಗತಿ ಬಂಧು ಸ್ವಸಹಾಯ ಸಂಘದ ೨೦ ನೇ ವಾರ್ಷಿಕೋತ್ಸವ

0

ಶ್ರೀ. ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಮರ್ಕಂಜ ಒಕ್ಕೂಟದ ಮಂಜು ಶ್ರೀ ಪ್ರಗತಿ ಬಂಧು ಸ್ವಸಹಾಯ ಸಂಘದ ೨೦ ನೇ ವಾರ್ಷಿಕೋತ್ಸವವು ಪನಿವಾರ ಗುಳಿಗ ಸಾನಿಧ್ಯದ ಸಭಾಭವನದಲ್ಲಿ ಸೆ. ೦೫ ರಂದು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷರಾದ ರಾಧಾಕೃಷ್ಣರವರು ವಹಿಸಿದ್ದರು.


ಸಂಘದ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಅನ್ನಪೂರ್ಣೇಶ್ವರಿ ಮಠದ ರಾಜೇಶ್‌ನಾಥ್ ಸ್ವಾಮೀಜಿಯವರು ದೀಪ ಬೆಳಗಿಸುವುದರ ಮೂಲಕ ನೆರವೇರಿಸಿದರು. ಸದಸ್ಯರಾದ ನಾರಾಯಣರವರು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ವಿಶೇಷವಾಗಿ ಒಕ್ಕೂಟದ ರತ್ನಶ್ರೀ ಸಂಘದ ಸದಸ್ಯರಾದ ಜಾನಕಿಯವರ ಪುತ್ರಿಯಾದ ಕು. ಸುಶ್ಮಿತಾ ರವರು ಗಡಿ ಭದ್ರತೆ ಪಡೆಗೆ ಆಯ್ಕೆಯಾಗಿದ್ದು ಇವರನ್ನು ಸನ್ಮಾನಿಸಲಾಯಿತು. ನಂತರ ಉದ್ಘಾಟಕಾರದ ರಾಜೇಶ್‌ನಾಥ್ ಸ್ವಾಮೀಜಿಯವರು ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿಯು ಮಲ್ಲಿಗೆ ಹೂಗಳನ್ನು ಒಂದೇ ಬಳ್ಳಿಯಲ್ಲಿ ಹೇಗೆ ಕಟ್ಟುತ್ತೇವೋ ಎಲ್ಲ ಜನರನ್ನು ಒಟ್ಟುಗೋಡಿಸಿ ಅಭಿವೃದ್ಧಿಗೊಳಿಸಿದೆ ಎಂದು ಸಂಘಕ್ಕೆ ಮತ್ತು ಯೋಜನೆಗೆ ಹಾಗೂ ಸನ್ಮಾನಿಸಲ್ಪಟ್ಟ ಕು. ಸುಶ್ಮಿತಾರಿಗೂ ಶುಭಹಾರೈಸಿ, ಆಶೀರ್ವದಿಸಿದರು.


ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು, ನಿಕಟ ಪೂರ್ವ ಉಪಾಧ್ಯಕ್ಷರು, ಪನಿವಾರ ಗುಳಿಗ ಸಾನಿಧ್ಯ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾದ ಅಮೃತಕುಮಾರ್ ರೈ, ಎರಡು ಒಕ್ಕೂಟದ ಅಧ್ಯಕ್ಷರುಗಳಾದ ರಾಧಾಕೃಷ್ಣ ಮತ್ತು ಗೋಪಾಲಕೃಷ್ಣರು, ವಲಯ ಮೇಲ್ವಿಚಾರಕರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಸೇವಾಪ್ರತಿನಿಧಿಯಾದ ರೋಹಿಣಿಯವರು ಮಾಡಿದರು. ಸಂಘದ ಸದಸ್ಯರಾದ ರಘುರಾಮರವರು ವಂದಿಸಿದರು.