ಸುಳ್ಯ ಭಾರತೀಯ ತೀಯ ಸಮಾಜದ ವತಿಯಿಂದ ಹಮ್ಮಿಕೊಂಡ ಓಣಂ ಆಚರಣೆಯ ಸಮಾರೋಪ ಸಮಾರಂಭವು ಸುಳ್ಯ ವಲಯ ಸಮಿತಿಯ ಅಧ್ಯಕ್ಷ ಪವಿತ್ರನ್ ಗುಂಡ್ಯ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
















ಅತಿಥಿಗಳಾಗಿ ಸುಳ್ಯ ಸಾರ್ವಜನಿಕಶ್ರೀಶಾರದಾಂಬಾ ಸೇವಾ ಸಮಿತಿ ಅಧ್ಯಕ್ಷ ನಾರಾಯಣ ಕೇಕಡ್ಕ ರವರು ಮಾತನಾಡಿ”ಸಾಂಪ್ರದಾಯಿಕವಾಗಿ ಇಂತಹ ಓಣಂ ಆಚರಣೆಯಿಂದ ಸಮಾಜ ಬಾಂಧವರಲ್ಲಿ ಒಗ್ಗಟ್ಟು ನಿರ್ಮಾಣವಾಗುವುದು. ಅರ್ಥ ಪೂರ್ಣ ಕಾರ್ಯಕ್ರಮದಿಂದ ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿ ಆಚಾರ ವಿಚಾರಗಳ ಅರಿವು ಮೂಡುವುದು ಎಂದು ಅವರು ಹೇಳಿದರು.

ಉಪ ವಲಯ ಅರಣ್ಯ ಅಧಿಕಾರಿ ಸೌಮ್ಯ ಎ.ಜೆ ,
ಕು. ನಿಶಾ ಹರೀಶ್ ಬೆಂಗಳೂರು, ನಗರ ಸಮಿತಿ ಅಧ್ಯಕ್ಷ ಸುರೇಶ್ ಕುತ್ತಮೊಟ್ಟೆ, ಕೋಶಾಧಿಕಾರಿ ಸುನಿಲ್ ಕುಮಾರ್ ಕೆ. ಸಿ ಪರಿವಾರಕಾನ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಬೆಳಗ್ಗಿನಿಂದ ಸಂಜೆಯ ತನಕ ಹಮ್ಮಿಕೊಂಡ ಸ್ಪರ್ಧೆಯ ವಿಜೇತರಿಗೆ ಬಹುಮಾನ ನೀಡಲಾಯಿತು.
ಕು. ಶುಭದಾ ಆರ್ ಪ್ರಕಾಶ್ ಪ್ರಾರ್ಥಿಸಿದರು. ಭಾಸ್ಕರ್ ಅಡ್ಕಾರ್ ಕಾರ್ಯಕ್ರಮ ನಿರ್ವಹಿಸಿದರು. ವಲಯ, ನಗರ ಹಾಗೂ ಗ್ರಾಮ
ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವ ಹಿಸಿದರು. ಅಪರಾಹ್ನ ಸಮಾಜದ ಬಾಂಧವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನಗೊಂಡಿತು.










