ಸುಳ್ಯ ಸೈಂಟ್ ಜೋಸೆಫ್ ಶಾಲಾ ಬಾಲಕಿಯರ ತಂಡಕ್ಕೆ ವಿನ್ನರ್ಸ್ ಪ್ರಶಸ್ತಿ

0

ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆಲೆಟ್ಟಿ ಯಲ್ಲಿ ನಡೆದ ಸುಳ್ಯ ತಾಲೂಕು ಮಟ್ಟದ 14ರ ವಯೋಮಾನದ ಬಾಲಕಿಯರ ವಾಲಿಬಾಲ್ ಪಂದ್ಯಾಟದಲ್ಲಿ ಸುಳ್ಯದ ಸೈಂಟ್ ಜೋಸೆಫ್ ಶಾಲೆ ಬಾಲಕಿಯರ ತಂಡವು ಪ್ರಥಮ ಪ್ರಶಸ್ತಿಯನ್ನು ಪಡೆದುಕೊಂಡಿದೆ. ತಸ್ವಿ, ವೈಷ್ಣವಿ, ಶಿಫಾ ಫಾತಿಮಾ ಕೃತಿ, ಸಾನ್ವಿ ಎ.ಜೆ ಮೌನ, ಮನ್ಹಾ ಫಾತಿಮಾ 7ನೇ ತರಗತಿ ಇವರು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. .ಶಾಲಾ ಜೊತೆ ಕಾರ್ಯದರ್ಶಿ ರೆ. ಫಾ. ಓಲ್ವಿನ್ ಡಿ’ಕುನ್ಹ , ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಮೇರಿ ಸ್ಟೆಲ್ಲಾ ರ ಮಾರ್ಗದರ್ಶನದಲ್ಲಿ, ದೈಹಿಕ ಶಿಕ್ಷಣ ಶಿಕ್ಷಕರಾದ ಪುಷ್ಪವೇಣಿ ಹುದೇರಿ ಕೊರಗಪ್ಪ ಬೆಳ್ಳಾರೆ ತರಬೇತಿ ನೀಡಿದ್ದರು.