Home ಪ್ರಚಲಿತ ಸುದ್ದಿ ರಾಷ್ಟ್ರೀಯ ಕರಾಟೆ; ಶ್ರೀಜಿತ್ ಬಿ ವೈ ಗೆ ದ್ವಿತೀಯ ಸ್ಥಾನ

ರಾಷ್ಟ್ರೀಯ ಕರಾಟೆ; ಶ್ರೀಜಿತ್ ಬಿ ವೈ ಗೆ ದ್ವಿತೀಯ ಸ್ಥಾನ

0

ಉಡುಪಿಯಲ್ಲಿ ಸೆ. 6ರಂದು ನಡೆದ ಪ್ರವೀಣ್ ಕುಮಾರ್ ಮೆಮೋರಿಯಲ್ ಆಲ್ ಇಂಡಿಯಾ ಓಪನ್ ಕರಾಟೆ ಚಾಂಪಿಯನ್ ಶಿಪ್- ೨೦೨೫ರಲ್ಲಿ ಗೂನಡ್ಕದ ಮಾರುತಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನ ವಿದ್ಯಾರ್ಥಿ ಶ್ರೀ ಜಿತ್ ಬಿ.ವೈ.ಯವರಿಗೆ ಪ್ರಶಸ್ತಿ ಲಭಿಸಿದೆ.


ಇನ್ ಸ್ಟಿಟ್ಯೂಟ್ ಆಫ್ ಕರಾಟೆ ಅಂಡ್ ಆರ್ಟ್ಸ್ ಮಲ್ಪೆ ಡೊಜೊ ವತಿಯಿಂದ ಉಡುಪಿಯ ಅಮೃತ ಗಾರ್ಡನ್‌ನಲ್ಲಿ ಸ್ಪರ್ಧೆ ಆಯೋಜಿಸಲಾಗಿತ್ತು. ೧೦ ವರ್ಷದ ಒಳಗಿನವರ ಕಟಾ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ.


ಇವರು ಉಡುಪಿಯಲ್ಲಿ ಇತ್ತೀಚೆಗೆ ನಡೆದ ವಲಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ವಿಜೇತರಾಗಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದರು. ಈತ ಮರ್ಕಂಜ ದ ಯೋಗೀಶ್ ಬಟ್ಟಮಡ್ಕ ಮತ್ತು ಶ್ರೀ ಮತಿ ಜ್ಯೋತಿ ದಂಪತಿಗಳ ಪುತ್ರ. ಇವರಿಗೆ ಕರಾಟೆ ಶಿಕ್ಷಕ ಚಂದ್ರಶೇಖರ ಕನಕಮಜಲು ಅವರು ತರಬೇತಿ ನೀಡುತ್ತಿದ್ದಾರೆ.

NO COMMENTS

error: Content is protected !!
Breaking