ಇತ್ತೀಚೆಗೆ ನಡೆದ ನಗರ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಕಸದ ವಿಚಾರವಾಗಿ ಭಾರಿ ಚರ್ಚೆ ನಡೆದಿದ್ದು ಬಿ.ಜೆ.ಪಿ ಮಂಡಲ ಪ್ರಧಾನ ಕಾರ್ಯದರ್ಶಿ ಮತ್ತು ನಗರ ಪಂಚಾಯತ್ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರಾಗಿರುವ ವಿನಯ ಕಂದಡ್ಕ ರವರು ಇವತ್ತು ಪಕ್ಷದ ಉನ್ನತ ಹುದ್ದೆಯಲ್ಲಿ ಇರುವ ಇವರು ಪಕ್ಷ ವಿರೋಧಿ ಚಟುವಟಿಕೆ ಮಾಡಿರುವುದು ಕಾರ್ಯಕರ್ತರಿಗೆ ಮಾಡಿದ ಅನ್ಯಾಯವಲ್ಲದೇ ಮತ್ತೇನೆ. ಇವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು ಬೇಕಲ್ಲವೇ ಎಂದು ಬಿಜೆಪಿ ಕಾರ್ಯಕರ್ತ ಸುಪ್ರಿತ್ ಮೋಂಟಡ್ಕ ಪ್ರಶ್ನಿಸಿದ್ದಾರೆ.















“ಈ ಹಿಂದೆ ನಾನು ಸುಳ್ಯ ನಗರದಲ್ಲಿ ಕಸಗಳು ಟನ್ ಗಟ್ಟಲೆ ನಗರ ಪಂಚಾಯತ್ ಒಳಗಡೆ ಶೇಖರಣೆ ಮಾಡಿರುವುದನ್ನು ವಿರೋಧಿಸಿ ನಾನು ನರೇಂದ್ರ ಮೋದಿ ರವರ ಕಲ್ಪನೆ ಸ್ವಚ್ಚ ಭಾರತ್ ಯೋಜನೆಯಡಿಯಲ್ಲಿ ನಾನು ಮತ್ತು ಚಿತ್ರನಟ ಅನಿರುದ್ ಹೋರಾಟ ಮಾಡಿರುತ್ತೇವೆ. ಹೋರಾಟದ ಫಲ ಕಸ ಅಲ್ಲಿಂದ ಖಾಲಿಯಾಗಿರುತ್ತದೆ. ಆಗೀನ ಸಂದರ್ಭದಲ್ಲಿ ಮಂಡಲ ಪ್ರಧಾನ ಕಾರ್ಯದರ್ಶಿಯಾದ ಸುಬೋದ್ ಶೆಟ್ಟಿ ಮೇನಾಲರು ಬಿ.ಜೆ.ಪಿ ಗೆ ಒಂದು ಶಿಸ್ತು ಇದೆ.
ಅ ಶಿಸ್ತನ್ನು ಮೀರಿ ಪಕ್ಷ ವಿರೋಧಿ ಚಟುವಟಿಕೆ ಮಾಡುತ್ತಾರೋ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಹೇಳಿಕೆ ನೀಡಿ ನನ್ನ ಸಾಮಾಜಿಕ ಜಾಲತಾಣದ ಸಹ ಸಂಚಾಲಕ ಜವಾಬ್ದಾರಿಯನ್ನು ತೆಗೆದಿರುತ್ತಾರೆ. ಆದರೇ ನಾನು ಈಗ ವಿನಯ ಕಂದಡ್ಕರ ನಡೆಯ ಕುರಿತು ಬಿ.ಜೆ.ಪಿ ಸುಳ್ಯ ಮಂಡಲ ಅಧ್ಯಕ್ಷರಿಗೆ, ಜಿಲ್ಲಾ ಅಧ್ಯಕ್ಷರಿಗೆ ಪ್ರಶ್ನೆ ಮಾಡುತ್ತೇನೆ. ವಿನಯ ಕಂದಡ್ಕ ರವರ ಮೇಲೆ ಶಿಸ್ತು ಕ್ರಮ ಯಾಕೆ ಕೈಗೊಂಡಿರುವುದಿಲ್ಲ? ಪಕ್ಷದ ಶಿಸ್ತಿನ ಪ್ರಕಾರ ನಗರ ಪಂಚಾಯತ್ ಆಡಳಿತ ಮಂಡಳಿಗೆ ವಿರುದ್ಧವಾಗಿ ವರ್ತಿಸಿರುವುದು ಅಲ್ಲದೇ ಈ ಹಿಂದೆ ಎಸ್.ಡಿ.ಪಿ.ಐ ಸದಸ್ಯರಾಗಿ ಈಗ ಕಾಂಗ್ರೆಸ್ ಸದಸ್ಯ ಉಮ್ಮರ್ ರವರಿಗೆ ಸನ್ಮಾನ ಮಾಡಿರುವುದು ನಾಚಿಕೆ ಗೇಡು ಅಲ್ಲದೆ ಗುಪ್ತವಾಗಿ ಒಂದು ದಿನದ ಮುಂಚಿತವಾಗಿ ನಗರ ಪಂಚಾಯತ್‌ನ ಕೆಲವೊಂದು ಸದಸ್ಯರು ಸಭೆ ನಡೆಸಿರುವುದು ಪಕ್ಷಕ್ಕೆ ಹಾಗೂ ಅಧ್ಯಕ್ಷರಿಗೆ ಮಾಡಿದ ಅವಮಾನ ಅಲ್ಲವೇ? ಕಾರ್ಯಕರ್ತರಿಗೆ ಏನು ಸಂದೇಶ ಕೊಡುತ್ತದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.










