ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ, ಸುಬ್ರಹ್ಮಣ್ಯ ಮಠಕ್ಕೆ ಆನಂದ ಗುರೂಜಿ ಭೇಟಿ

0

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ರಾಜ್ಯ ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಆನಂದ ಗುರೂಜಿ ಸೆ.9 ರಂದು ಭೇಟಿ ನೀಡಿದರು.

ಶ್ರೀ ದೇವರ ದರುಶನ ಪಡೆದ ಅವರಿಗೆ ದೇವಳದ ಅರ್ಚಕರು ಮಹಾಪ್ರಸಾದ ನೀಡಿದರು. ಬಳಿಕ ಅವರು ಹೊಸಳಿಗಮ್ಮನ ದರುಶನ ಮಾಡಿ ಪ್ರಸಾದ ಸ್ವೀಕರಿಸಿದರು.

ಸ್ವಾಮೀಜಿಗಳ ಭೇಟಿ:
ಬಳಿಕ ಅವರು ಸಂಪುಟ ನರಸಿಂಹ ಸ್ವಾಮಿ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಗಳನ್ನು ಭೇಟಿ ಮಾಡಿದರು. ಸ್ವಾಮೀಜಿಗಳು ಆನಂದ ಗುರೂಜಿ ಅವರಿಗೆ ಶಾಲು ಹೊದಿಸಿ ಫಲ ಮಂತ್ರಾಕ್ಷತೆ ನೀಡಿದರು.


ಘಾಟಿ ಸುಬ್ರಹ್ಮಣ್ಯ ದೇವಳದ ಅರ್ಚಕ ಗುರುರಾಜ ಶರ್ಮ, ಕುಕ್ಕೆ ದೇವಳದ ಕಚೇರಿ ಅಧೀಕ್ಷಕ ಕೆ.ಎಂ.ಗೋಪಿನಾಥ್ ನಂಬೀಶ ಉಪಸ್ಥಿತರಿದ್ದರು.