ಬೊಬ್ಬೆಕೇರಿಯಲ್ಲಿ ಹೊಂಡ ಗುಂಡಿಯಾದ ರಸ್ತೆಯನ್ನು ಶ್ರಮ ದಾನದ ಮೂಲಕ ದುರಸ್ತಿ

0

ಮುರುಳ್ಯ ಗ್ರಾಮ ಬೊಬ್ಬೆಕ್ಕೇರಿ ಯಲ್ಲಿ ಮಂಜೇಶ್ವರ ಕುಕ್ಕೆ ಸುಬ್ರಮಣ್ಯ ರಾಜ್ಯ ಹೆದ್ದಾರಿ ರಸ್ತೆಯು ಹೊಂಡಗುಂಡಿಗಳಿಂದ ಕೂಡಿದ್ದ ಹಿನ್ನೆಲೆ ರಸ್ತೆ ಯನ್ನು ಮುರುಳ್ಯ ಯುವಕರು ಒಟ್ಟಾಗಿ ತತ್ಕಲಿಕಾ ಕಲ್ಲು ಮಣ್ಣು ಹಾಕಿ ಮುಚ್ಚಿ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಟ್ಟರು.

ಇಲ್ಲಿ ಗುಂಡಿ ತಪ್ಪಿಸಲು ಹೋಗಿ ಹಲವು ಅಪಘಾತಗಳು ನಡೆದಿವೆ.

ಈ ದುರಸ್ಥಿ ಕಾರ್ಯಕ್ಕೆಇಬ್ರಾಹಿಂ ಕಲಿಲ್ ಉದೇರಿ, ಮುಸ್ತಫಾ, ಸಮಹಾದಿ ಆನ್ಪಾಲ್ ಶಾ ರಾಗಿಪೇಟೆ ಹಾಗೂ ಇತರರು ಜೊತೆ ಗೂಡಿದರು.

ಈ ರಸ್ತೆಯನ್ನು ಸಂಬಂಧಪಟ್ಟ ಅಧಿಕಾರಿಗಳು ದುರಸ್ಥಿಗಾಗಿ ಮುತುವರ್ಜಿ ವಹಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.