ಪಂಜ: ಕೇಸರ್ದ ಪರ್ಬ- ಕೆಸರು ಗದ್ದೆ ಕ್ರೀಡಾ ಕೂಟ

0

ಕೆಸರಗದ್ದೆಯಲ್ಲಿ ವಿವಿಧ ಆಟೋಟ ಸ್ಪರ್ಧೆಗಳ ಸಂಭ್ರಮ

ಜೈ ಕರ್ನಾಟಕ ಯುವಕ ಮಂಡಲ ಮತ್ತು ಕೃಪಾ ಯುವತಿ ಮಂಡಲ ಇದರ ಜಂಟಿ ಆಶ್ರಯದಲ್ಲಿ ನಡೆದ ನಾಲ್ಕನೇ ವರ್ಷದ ಕೇಸರ್ದ ಪರ್ಬ- ಕೆಸರು ಗದ್ದೆ ಕ್ರೀಡಾ ಕೂಟ
ಸೆ.7 ರಂದು ಅಳ್ಪೆ ಕುದ್ಕುಳಿ ಹಿಮಕರ ಇವರ ಗದ್ದೆಯಲ್ಲಿ ನಡೆಯಿತು.

ಕೆಸರುಗದ್ದೆಯಲ್ಲಿ ಹಗ್ಗ ಜಗ್ಗಾಟ ವಾಲಿಬಾಲ್, ತ್ರೋಬಾಲ್, ಹಾಳೆಯಲ್ಲಿ ಎಳೆಯುವುದು, ಮಡಕೆ ಒಡೆಯುವುದು, ಓಟ, ರಿಲೇ, ನಿಧಿ ಹುಡುಕುವುದು, ಹಿಮ್ಮುಖ ಓಟ ಸ್ಪರ್ಧೆಗಳು ಸಂಭ್ರಮದಿಂದ ನಡೆಯಿತು. ಅಳ್ಪೆ ಚಿಂಗಾಣಿ ಗುಡ್ಡೆ ಶ್ರೀ ಉಳ್ಳಾಕುಲು ಉಳ್ಳಾಲ್ತಿ ದೈವಸ್ಥಾನದ ಪ್ರಧಾನ ಪರಿಚರಕರಾದ ಚಂದ್ರಶೇಖರ ಕೋಡಿ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಂದ್ರಶೇಖರ ಶಾಸ್ತ್ರಿ ಮಾತನಾಡಿ, ನಮ್ಮ ಸಂಸ್ಕೃತಿ, ಸನಾತನ ಹಿಂದುತ್ವವನ್ನು ಉಳಿಸಬೇಕಾದರೆ ಯುವಜನತೆ ಮುಂದೆ ಬರಬೇಕು ಎಂದರು.

ಇನ್ನೋರ್ವ ಅತಿಥಿ ಪಂಜ ಗ್ರಾಮ ಪಂಚಾಯತ್ ಉಪಾಧ್ಯಕ್ಷ ನಾರಾಯಣ ಕೃಷ್ಣನಗರ ಶುಭಹಾರೈಸಿದರು. ನಿವೃತ್ತ ಕೆ. ಎಸ್. ಆರ್. ಟಿ. ಸಿ ನೌಕರ ನಾರಾಯಣ ಪಲ್ಲೋಡಿ , ಗದ್ದೆಯ ಮಾಲಕರದ ಹಿಮಕರ ಕುದ್ಕುಳಿ ಶುಭಹಾರೈಸಿದರು.

ಜೈ ಕರ್ನಾಟಕ ಯುವಕ ಮಂಡಲದ ಅಧ್ಯಕ್ಷ ವಿದ್ಯಾನಂದ ಮೇಲ್ಮನೆ ಸಭಾಧ್ಯಕ್ಷತೆ ವಹಿಸಿದ್ದರು. ಯುವತಿ ಮಂಡಲದ ಅಧ್ಯಕ್ಷೆ ಶ್ರೀಮತಿ ಚಂದ್ರಕಲಾ ಶಿರಾಜೆ, ಕಾರ್ಯದರ್ಶಿ ಶ್ರೀಮತಿ ಧನ್ಯ ಕೋಡಿ, ಯುವಕ ಮಂಡಲದ ಕಾರ್ಯದರ್ಶಿ ಗಣೇಶ್ ಕರಿಮಜಲು, ಸಂಚಾಲಕ ಶ್ರೀಧರ್ ಬನ, ಕಾರ್ಯದರ್ಶಿ ನಿತಿನ್ ತೋಟ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ದಯಾನಂದ ಮೇಲ್ಮನೆ ವೇದಿಕೆಗೆ ಆಹ್ವಾನಿಸಿದರು. ಶ್ರೀಮತಿ ಗೀತಸುಧಾ ತೋಟ ಪ್ರಾರ್ಥಿಸಿದರು. ಜಗದೀಶ್ ಅಳ್ಪೆ ಸ್ವಾಗತಿಸಿದರು. ಗುರುಪ್ರಸಾದ್ ತೋಟ ಪ್ರಸ್ತಾವನೆಗೈದರು. ಕೌಶಿಕ್ ಕುಳ ನಿರೂಪಿಸಿದರು. ಶ್ರೀಮತಿ ಧನ್ಯ ಕೋಡಿ ವಂದಿಸಿದರು. ಪ್ರದೀಪ್ ಎಣ್ಮೂರು ವೀಕ್ಷಕ ವಿವರಣೆ ನೀಡಿದರು. ಉಮೇಶ್ ಪಂಜದಬೈಲು ನಿರ್ಣಾಯಕರಾಗಿ ಭಾಗವಹಿಸಿದ್ದರು.