ಕೆ.ವಿ.ಜಿ. ತಾಂತ್ರಿಕ ಮಹಾವಿದ್ಯಾಲಯದ ಪ್ರಥಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮವು ಕೆ.ವಿ.ಜಿ. ಸಮುದಾಯ ಭವನ, ಅಮರಶ್ರೀಭಾಗ್ನಲ್ಲಿ ಸೆ.10ರಂದು ನಡೆಯಿತು.

ಸಿವಿಲ್ ಇಂಜಿನಿಯರಿಂಗ್ ವಿಭಾಗದ ಪ್ರೊ. ಕೃಷ್ಣರಾಜ್ ಎಂ.ವಿ. ಮತ್ತು ವಿದ್ಯಾರ್ಥಿ ಬಳಗ ಪ್ರಾರ್ಥಿಸಿದರು.
ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲ ಡಾ. ಶ್ರೀಧರ್ ಕೆ. ಸ್ವಾಗತಿಸಿ ಕಾಲೇಜಿನ ಬಗ್ಗೆ ಪರಿಚಯಿಸಿ, ವಿದ್ಯಾರ್ಥಿ ಪ್ರವೇಶ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.
ಮೌರ್ಯ ಆರ್. ಕುರುಂಜಿ, ಎಕ್ಸೆಕ್ಯುಟಿವ್ ಡೈರೆಕ್ಟರ್, ಕೆ.ವಿ.ಜಿ.ಡಿ.ಸಿ.&ಹೆಚ್ ಮತ್ತು ಕಾಲೇಜಿನ ಆಡಳಿತ ಮಂಡಳೀಯ ಸದಸ್ಯ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮತ್ತು ಸ೦ಸ್ಥೆಯ ಬಗ್ಗೆ ಕಿರು ಪರಿಚಯ ನೀಡಿದರು.

ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಉತ್ತಮ ತ೦ತ್ರಜ್ಞರಾಗುವ೦ತೆ ಸೂಚಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಆಗಮಿಸಿದ ಡಾ. ಡೆಮಿಯನ್ ಅಂಟೋನಿ ಡಿಮೆಲ್ಲೊ, ಉಪಪ್ರಾಂಶುಪಾಲ ಮತ್ತು ಡೀನ್ ಅಕಾಡೆಮಿಕ್ಸ್, ಕೆನರಾ ಇಂಜಿನಿಯರಿಂಗ್ ಕಾಲೇಜು, ಬಂಟ್ವಾಳ ಅಲ್ಲದೆ BOS ಚೇರ್ಮೆನ್ ಮತ್ತು ಅಕಾಡೆಮಿಕ್ ಸೆನೆಟ್ ಮೆಂಬರ್, ವಿ.ಟಿ.ಯು., ಬೆಳಗಾವಿ ಇವರನ್ನು ಸ೦ಸ್ಥೆಯ ವತಿಯಿ೦ದ ಸನ್ಮಾನಿಸಲಾಯಿತು. ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ (AI&ML)ಮುಖ್ಯಸ್ಥರು ಡಾ. ಸವಿತಾ ಸಿ.ಕೆ. ಅತಿಥಿಯನ್ನು ಪರಿಚಯಿಸಿ ಶ್ರೀಯುತರ ಸನ್ಮಾನ ಪತ್ರವನ್ನು ವಾಚಿಸಿದರು. ಕಠಿಣ ಪರಿಶ್ರಮದೊ೦ದಿಗೆ ಉತ್ತಮ ಭವಿಷ್ಯ ರೂಪಿಸಲು ಸಾಧ್ಯ ಹಾಗೂ ತ೦ತ್ರಜ್ಞಾನವನ್ನು ಅರಿತು ಅವಕಾಶಗಳನ್ನು ಪಡೆದುಕೊಳ್ಳುವ೦ತೆ ಮುಖ್ಯ ಅತಿಥಿ ಡಾ. ಡೆಮಿಯನ್ ಅಂಟೋನಿ ಡಿಮೆಲ್ಲೊ ವಿದ್ಯಾರ್ಥಿಗಳಿಗೆ ಸಲಹೆಯನ್ನು ನೀಡಿದರು.

ಈ ಸ೦ದರ್ಭದಲ್ಲಿ ಕಾಲೇಜಿನ ಘಟಿಕೋತ್ಸವದ ವರದಿಯನ್ನು ಒಳಗೊ೦ಡ ಕೈಪಿಡಿಯನ್ನು ಮುಖ್ಯ ಅಥಿತಿ ಡಾ. ಡೆಮಿಯನ್ ಅಂಟೋನಿ ಡಿಮೆಲ್ಲೊ ಬಿಡುಗಡೆಗೊಳಿಸಿದರು. ಕಾರ್ಯಕ್ರಮದ ಸ೦ಯೋಜಕಿ ಹಾಗೂ ಡೀನ್-ಅಕಾಡೆಮಿಕ್ ಡಾ. ಪ್ರಜ್ಞಾ ಯ೦. ಆರ್. ವಿದ್ಯಾರ್ಥಿಗಳಿಗೆ ಉತ್ತೇಜನ ನೀಡುವ Student Induction Programme ಬಗ್ಗೆ ವಿವರಿಸಿದರು. ಪೋಷಕರಾದ ಶ್ರೀ ಚಂದ್ರಶೇಖರ್ ಕಾಂತಮಂಗಲ, ನಿವೃತ್ತ ಪ್ರಾಂಶುಪಾಲ, ಡಾ. ಕೆ. ಶಿವರಾಮ ಕಾರಂತ ಕಾಲೇಜು, ಸರಕಾರಿ ಪ್ರಥಮ ದರ್ಜೆ ಕಾಲೇಜು, ಬೆಳ್ಳಾರೆ ಇವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.















ಕಾಲೇಜಿನ ಪ್ರಾಂಶುಪಾಲ ಡಾ. ಸುರೇಶ ವಿ.ಯವರು ವಿದ್ಯಾರ್ಥಿಗಳಿಗೆ ಸ್ವಾಗತವನ್ನು ಬಯಸುತ್ತಾ ಕಾಲೇಜಿನ ವಿವಿಧ ವೈಷಿಷ್ಟ್ಯತೆ ಬಗ್ಗೆ ವಿವರಿಸುತ್ತಾ ವಿದ್ಯಾರ್ಥಿಗಳು ಕಲಿಕೆಯೊಂದಿಗೆ ಉತ್ತಮ ಸಂಸ್ಕಾರ, ಸಮಯ ಮತ್ತು ಶ್ರದ್ಧೆಯಿಂದ ಶಿಸ್ತನ್ನು ಅಳವಡಿಸಿಕೊಂಡು ಮುಂದಿನ ನಾಲ್ಕು ವರ್ಷಗಳ ವಿದ್ಯಾರ್ಥಿ ಜೀವನ ಉತ್ತಮವಾಗಿ ಇರಲಿ ಎಂದು ಹೇಳಿ ಹೊಸ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ವಿ.ಟಿ.ಯು ಎಕ್ಸಿಕ್ಯುಟಿವ್ ಕೌನ್ಸಿಲ್ ಸದಸ್ಯರು/ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥರು ಡಾ. ಉಜ್ವಲ್ ಯು.ಜೆ.ಯವರು ಮಾತನಾಡಿ ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜು ಹೊಸ ತಂತ್ರಜ್ಞಾನಕ್ಕೆ ಅನುಗುಣವಾಗಿ ಕಾಲೇಜಿನ ಶೈಕ್ಷಣಿಕ ಪದ್ಧತಿಯಲ್ಲೂ ಅತೀ ಹೆಚ್ಚಿನ ಪ್ರಾಮುಖ್ಯತೆಯನ್ನು ಪ್ರಾಯೋಗಿಕ ವಿಷಯಗಳಿಗೆ ಹಾಗೂ ಉದ್ಯೋಗ ತರಬೇತಿಗಳನ್ನು ನೀಡುತ್ತಿದ್ದು ಇದರ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಂಡು ಉತ್ತಮ ರೀತಿಯ ಉದ್ಯೋಗ ಪಡೆದು ಕಾಲೇಜಿಗೆ ಉತ್ತಮ ಹೆಸರು ತರಬೇಕೆಂದು ಹೇಳಿ ಶುಭಹಾರೈಸಿದರು.
ಕೆಮಿಸ್ಟ್ರಿ ವಿಭಾಗದ ಮುಖ್ಯಸ್ಥರಾದ ಡಾ. ಸುರೇಖಾ ಎಂ. ವ೦ದನಾರ್ಪಣೆಗೈದರು. ಪ್ರಾಧ್ಯಾಪಕಿಯರಾದ ಪ್ರೊ. ಪ್ರಜ್ಞ ವಿ.ಟಿ., ಪ್ರೊ. ಸೌಮ್ಯ ಎಂ.ಕೆ. ಹಾಗೂ ಪ್ರೊ. ಆಶ್ರಿತಾ ಕೆ.ಎಂ. ಕಾರ್ಯಕ್ರಮವನ್ನು ನಿರೂಪಿಸಿದರು.



