ಫೈನಾನ್ಸ್ ನವರ ಕಿರುಕುಳದ ಆರೋಪ – ಮಾಲಕ ಆತ್ಮಹತ್ಯೆ ಯತ್ನ
ಸರಕಾರ ಕೆಂಪು ಕಲ್ಲು ನಿಷೇಧ ಮಾಡಿದುದರಿಂದ ಲಾರಿಗೆ ಬಾಡಿಗೆ ಇಲ್ಲದೆ ಕಂತು ಪಾವತಿ ಬಾಕಿಯಾಗಿ ಫೈನಾನ್ಸ್ ನವರು ಮನೆಗೆ ಬಂದು ಕಿರುಕುಳ ನೀಡುತ್ತಿದ್ದಾರೆಂಬ ಆರೋಪದಲ್ಲಿ ಲಾರಿ ಮಾಲಕ ಎಲಿಮಲೆಯ ಭಾನುಪ್ರಕಾಶ್ ಎಂಬವರು ವಿಷ ಸೇವಿಸಿ ಆತ್ಮಹತ್ಯೆ ಯತ್ನ ನಡೆಸಿರುವ ಘಟನೆ ವರದಿಯಾಗಿದೆ.
ಇಂದು ಮಧ್ಯಾಹ್ನ ಮನೆಯಲ್ಲಿ ಈ ಘಟನೆ ನಡೆದಿದ್ದು ವಿಷಯ ತಿಳಿದ ಮನೆಯವರು ಅವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆತಂದಿರುವುದಾಗಿ ತಿಳಿದುಬಂದಿದೆ.















ಸಾಲ ಪಡೆದ ಹಾಗೂ ಫೈನಾನ್ಸ್ ಕಿರುಕುಳದ ಕುರಿತು ಚೀಟಿ ಬರೆದಿರುವುದಾಗಿಯೂ ಅದು ಮನೆಯವರಿಗೆ ದೊರೆತಿರುವುದಾಗಿ ಹೇಳಲಾಗುತ್ತಿದೆ. ಹೆಚ್ಚಿನ ವಿವರ ಇನ್ನಷ್ಟೆ ತಿಳಿದು ಬರಬೇಕಾಗಿದೆ.



