ಮಾರುತಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ಗೆ ರಾಷ್ಟ್ರೀಯ ಕರಾಟೆ ಚಾಂಪಿಯನ್ಶಿಪ್ ಸ್ಪರ್ಧೆಯಲ್ಲಿ ಹಲವು ಪ್ರಶಸ್ತಿಗಳು

0

“Institute of Karate and Allied Arts Malpe Dojo” ಅಯೋಜಿಸಿರುವಂತಹ ಆಲ್ ಇಂಡಿಯಾ ಓಪನ್ ಕರಾಟೆ ಚಾಂಪಿಯನ್ಶಿಪ್ 2025ನಲ್ಲಿ ಕಟಾ ಮತ್ತು ಕುಮಿಟೆ ವಿಭಾಗದಲ್ಲಿ ಮಾರುತಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ಗೆ ಐದನೇ ತರಗತಿಯ ವಿದ್ಯಾರ್ಥಿಗಳಾದ ಕುನಾಲ್ ಎನ್ ಎಲ್ ಪ್ರಥಮ , ತನ್ಮಯ್ ಬಿ.ಕೆ, ದ್ವಿತೀಯ , ಶ್ರವಣ್ ಕೊಯಿಂಗೋಡಿ ತೃತೀಯ ಸ್ಥಾನ ಪಡೆದುಕೊಂಡಿರುತ್ತಾರೆ.

ಕಟಾ ವಿಭಾಗದಲ್ಲಿ ತಶ್ವಿಕ್ ಎಂ ಮತ್ತು ವಂಶಿಕ್ ಆರ್ ತೃತೀಯ ಸ್ಥಾನ ಹಾಗೂ 6ನೇ ತರಗತಿಯ ವಿದ್ಯಾರ್ಥಿಯಾದ ಮಹಮ್ಮದ್ ಶಾಜಿಲ್ ಕೆ ಎಸ್ ಮತ್ತು 7ನೇ ತರಗತಿಯ ವಿದ್ಯಾರ್ಥಿಯಾದ ಶೀಜಿತ್.ವೈ ಕಟಾ ಮತ್ತು ಕುಮಿಟೆ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿರುತ್ತಾರೆ, ಮತ್ತು 8ನೇ ತರಗತಿಯ ವಿದ್ಯಾರ್ಥಿಯಾದ ಯಶ್ಮಿತ ಎಂ, ಪ್ರಥಮ ಸ್ಥಾನ ಕುಮಿಟೆ ಹಾಗೂ ದ್ವಿತೀಯ ಸ್ಥಾನ ಕಟಾ ವಿಭಾಗದಲ್ಲಿ ಪ್ರಶಸ್ತಿಗಳನ್ನು ಪಡೆದುಕೊಂಡಿರುತ್ತಾರೆ ಎಂದು ಪ್ರಾಂಶುಪಾಲರು ತಿಳಿಸಿರುತ್ತಾರೆ. ಇವರಿಗೆ ನಮ್ಮ ಶಾಲೆಯ ಕರಾಟೆ ತರಬೇತುದಾರರಾದ ಚಂದ್ರಶೇಖರ ಕನಕಮಜಲುರವರು ತರಬೇತಿಯನ್ನು ನೀಡಿರುತ್ತಾರೆ.