ಜೇನು ಸೊಸೈಟಿ ಮಹಾಸಭೆ – 20% ಡಿವಿಡೆಂಟ್ ಘೋಷಣೆ

0

ದ.ಕ.ಜೇನು ವ್ಯವಸಾಯಗಾರರ ಸಹಕಾರಿ ಸಂಘ ನಿಯಮಿತ ಪುತ್ತೂರು ಇದರ ವಾರ್ಷಿಕ ಮಹಾಸಭೆಯು ಮಾಧುರಿ ಸೌಧ ಸಭಾಂಗಣ ಪುತ್ತೂರುನಲ್ಲಿ ಸಂಘದ ಅಧ್ಯಕ್ಷರಾದ ಸಹಕಾರಿ ರತ್ನ ಚಂದ್ರ ಕೋಲ್ಚಾರ್ ಇವರ ಅಧ್ಯಕ್ಷತೆಯಲ್ಲಿ ಸೆ. 11 ರಂದು ನಡೆಯಿತು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ತಿಮ್ಮಯ್ಯ ಪಿ ವರದಿ ವಾಚಿಸಿದರು. ಪ್ರಾಥನೆಯನ್ನು ದಕ್ಷಿತಾ ಬಿ. ಕೆ ಯವರು ನೆರವೇರಿಸಿದರು.

2024-25ನೇ ಸಾಲಿನ ಆರ್ಥಿಕ ವರ್ಷದ ವ್ಯವಹಾರ 3.5ಕೋಟಿ ಹೊಂದಿದ್ದು, ಅಲ್ಲದೆ 1.16 ಲಕ್ಷ ಕೆ.ಜಿ ಜೇನು ಮಾರಾಟ ಮಾಡಲಾಗಿದೆ. ಸಂಸ್ಥೆಯು ರೂ 97.22 ಲಕ್ಷ ವ್ಯವಹಾರ ಲಾಭಗಳಿಸಿದೆ. ರೂ 20.31ಲಕ್ಷ ನಿಲ್ವ ಲಾಭ ಗಳಿಸಲಾಗಿದೆ ಒಟ್ಟು ವ್ಯವಹಾರ ರೂ 40.11 ಕೋಟಿ ಆಗಿರುತ್ತದೆ. ಸಂಸ್ಥೆಯಿಂದ 20% ಡಿವಿಡೆಂಟ್ ನೀಡುವುದಾಗಿ ಸಭೆಯಲ್ಲಿ ತೀರ್ಮಾನಿಸಲಾಯಿತು.

11 ಜನ ಅತೀ ಹೆಚ್ಚು ಜೇನು ಮಾರಾಟ ಮಾಡಿದ ಜೇನು ಕೃಷಿಕರಿಗೆ ಬಹುಮಾನ ನೀಡಲಾಯಿತು. ಕರ್ನಾಟಕ ರಾಜ್ಯ ರೈತ ಉತ್ಪದಕರ ಸಂಸ್ಥೆಗಳ ಸಹಕಾರ ಸಂಘ ಮಹಾ ಮಂಡಲ ಬೆಂಗಳೂರು ಇದರ ನಿರ್ದೇಶಕರಾದ ವೀರಪ್ಪ ಗೌಡರವರನ್ನು ಸನ್ಮಾನಿಸಿದರು.

ಸಂಸ್ಥೆಯಿಂದ ನಿವೃತ್ತಿ ಹೊಂದಿದ ಆಶಾ ಇವರನ್ನು ಸನ್ಮಾನಿಸಲಾಯಿತು.

ಉಪಾಧ್ಯಕ್ಷರಾದ ರಾಜಾರಾಮ್ ಶೆಟ್ಟಿ, ನಿರ್ದೇಶಕರುಗಳಾದ ಜಿ. ಪಿ. ಶ್ಯಾಮ ಭಟ್, ಜನಾರ್ದನ ಚೂoತಾರು, ಡಿ. ತನಿಯಪ್ಪ, ಶ್ರೀಶ ಕೊಡುವೂರು, ಎಚ್. ಸುಂದರ ಗೌಡ, ಶ್ರೀಮತಿ ಇಂದಿರಾ.ಕೆ, ಹರೀಶ್ ಕೋಡ್ಲ, ಪಾಂಡುರಂಗ ಹೆಗ್ಡೆ, ಪುರುಷೋತ್ತಮ ಭಟ್ ಎಂ., ಶಿವಾನಂದ, ಮೋಹನ ಎ, ಪುಟ್ಟಣ್ಣ ಗೌಡ ಕೆ, ಗೋವಿಂದ ಭಟ್ ಪಿ, ಶಂಕರ ಪೆರಾಜೆ, ಶ್ರೀಮತಿ ಸರಸ್ವತಿ ವೈ. ಪಿ, ಶ್ರೀಮತಿ ಸುಶೀಲ, ಸದಸ್ಯರುಗಳು ಉಪಸ್ಥಿತರಿದ್ದರು.