
ಮೊಬೈಲ್ ರಿಟೇಲರ್ಸ್ ಅಸೋಸಿಯೇಶನ್ ಸುಳ್ಯ ಇದರ ವತಿಯಿಂದ ಅಖಿಲ ಭಾರತೀಯ ಮೊಬೈಲ್ ರೀಟೈಲರ್ಸ್ವ್ ಅಸೋಸಿಯೇಶನ್ ಇದರ ಹನ್ನೊಂದನೇ ವಾರ್ಷಿಕೋತ್ಸವ ಕಾರ್ಯಕ್ರಮ ಸೆ.11 ರಂದು ಸುಳ್ಯ ವರ್ತಕರ ಸಮುದಾಯ ಭವನದಲ್ಲಿ ನಡೆಯಿತು.















ಈ ಕಾರ್ಯಕ್ರಮದಲ್ಲಿ ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಯೊರ್ವರಿಗೆ ಧನ ಸಹಾಯ ವಿತರಣೆ ಮಾಡಲಾಯಿತು.ಇದೇ ಸಂದರ್ಭದಲ್ಲಿ ಸುಳ್ಯ ತಾಲೂಕಿನ ಗ್ರಾಮೀಣ ಹುಡುಗಿ ನಾಡಿನ ರಕ್ಷಣೆಗಾಗಿ ಬಿಎಸ್ಎಫ್ ಗೆ ಆಯ್ಕೆಯಾದ ಸುಶ್ಮಿತಾ ಬೆದ್ರಪಣೆ ಯವರನ್ನು ಅಭಿನಂದಿಸಿ ಗೌರವಿಸಲಾಯಿತು.
ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ .ಬಿ ಸುಧಾಕರ ರೈ ಯವರು ಅಮ್ರೋ 11ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಕೇಕ್ ಕತ್ತರಿಸಿ ಹಂಚುವ ಮೂಲಕ ಆಚರಿಸಿದರು.ಸುಳ್ಯ ಪ್ರೆಸ್ ಕ್ಲಬ್ ಅಧ್ಯಕ್ಷ ಶರೀಫ್ ಜಟ್ಟಿಪಳ್ಳ ಶುಭ ಹಾರೈಸಿದರು.ಮೊಬೈಲ್ ರಿಟೇಲರ್ಸ್ ಅಸೋಸಿಯೇಶನ್ ಸುಳ್ಯ ತಾಲೂಕು ಘಟಕದ ಅಧ್ಯಕ್ಷ ಅಬ್ದುಲ್ ರಹಿಮಾನ್ ಸಂಗಂ ಅಧ್ಯಕ್ಷತೆ ವಹಿಸಿದ್ದರು.ಉಡುಪಿ ಮತ್ತು ದ.ಕ ಜಿಲ್ಲಾ ಮೊಬೈಲ್ ರಿಟೇಲರ್ಸ್ ಅಸೋಸಿಯೇಶನ್ ನ ಮಾಜಿ ಅಧ್ಯಕ್ಷ ಶೈಲೇಂದ್ರ ಸರಳಾಯ,ಸುಳ್ಯ ತಾಲೂಕು ಮಾಜಿ ಅಧ್ಯಕ್ಷ ಶಬ್ಬೀರ್ ಆರ್ಕುಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರುಅಧ್ಯಕ್ಷ ರಹಿಮಾನ್ ಸ್ವಾಗತಿಸಿ ಪ್ರಧಾನ ಕಾರ್ಯದರ್ಶಿ ಮದನ್ ಕಾರ್ಯಕ್ರಮ ನಿರೂಪಿಸಿದರು.ಸುಳ್ಯ ಮೊಬೈಲ್ ರಿಟೇಲರ್ಸ್ ಅಸೋಸಿಯೇಶನ್ ಪಧಾದಿಕಾರಿಗಳು,ಸದಸ್ಯರು ಭಾಗವಹಿಸಿದರು










