ಕಳಂಜ : ಮಹಿಳಾ ಗ್ರಾಮ ಸಭೆ, ಪೋಷಣ್ ಅಭಿಯಾನ ಕಾರ್ಯಕ್ರಮ

0

ಕಳಂಜ ಗ್ರಾಮ ಪಂಚಾಯತ್ ನ , 2025 – 26ನೇ ಸಾಲಿನ ಮಹಿಳಾ ಗ್ರಾಮ ಸಭೆಯು ಸೆ.11 ರಂದು
ಪಂಡಿತ್ ದೀನ್ ದಯಾಳ್ ಸಮುದಾಯ ಭವನ ಅಯ್ಯನಕಟ್ಟೆ ಯಲ್ಲಿ ನಡೆಯಿತು. ಇದರೊಂದಿಗೆ ಅಂಗನವಾಡಿ ಕೇಂದ್ರ ವತಿಯಿಂದ ಪೋಷಣ್ ಅಭಿಯಾನ ಕಾರ್ಯಕ್ರಮವನ್ನು ನಡೆಸಲಾಯಿತು.

ವೇದಿಕೆಯಲ್ಲಿ ಪುತ್ತೂರು ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ಶ್ರೀಮತಿ ಪ್ರೇಮಲತಾ ರಾವ್. ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ, ಉಪಾಧ್ಯಕ್ಷರಾದ ಶ್ರೀಮತಿ ಪ್ರೇಮಲತಾ, ಸದಸ್ಯರಾದ ಗಣೇಶ್ ರೈ.ಮಕ್ಕಳ ಕಲ್ಯಾಣ.ಇಲಾಖೆಯ ಮೇಲ್ವಿಚಾರಕಿ ಶ್ರೀಮತಿ ಉಷಾ ಪ್ರಸಾದ್ ರೈ, ಪಿಡಿಒ ಶ್ರೀಮತಿ ಗೀತಾ, ಕಾರ್ಯದರ್ಶಿ ಪದ್ಮಯ್ಯ , ಹಿರಿಯ ಆರೋಗ್ಯ ಸಹಾಯಕಿ ಶ್ರೀಮತಿ ಬೇಬಿ, ಅಂಗನವಾಡಿ ಕಾರ್ಯಕರ್ತೆ ರಾದ ಶ್ರೀಮತಿ ವಿಜಯ, ಶ್ರೀಮತಿ ಯಶೋಧ, ಶ್ರೀಮತಿ ಲಲಿತಾ . ಶ್ರೀಮತಿ ಶೃತಿ. ಪೋಷಕರು, ಮಹಿಳೆಯರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ತ್ರೋಬಾಲ್ ಆಟಗಾರ್ತಿ ಭವಿತ ಬೇರಿಕೆಯವರನ್ನು ಗೌರವಿಸಲಾಯಿತು.