ಮೈಸೂರಿನ ಕರ್ನಾಟಕ ರಾಜ್ಯ ಡಾ|ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯವು ನಡೆಸಿದ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ರಿಷಿಕಾ ಟಿ.ಹೆಚ್. ಹೊಸೊಳಿಕೆ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.















ಗುತ್ತಿಗಾರು ಸ.ಹಿ.ಪ್ರಾ. ಶಾಲೆಯ ೫ನೇ ತರಗತಿಯ ವಿದ್ಯಾರ್ಥಿಯಾಗಿರುವ ಈಕೆ ಕಂದ್ರಪ್ಪಾಡಿ ಸ.ಹಿ.ಪ್ರಾ ಶಾಲೆಯ ಹಿರಿಯ ವಿದ್ಯಾರ್ಥಿನಿ. ಇವರು ದೇವಚಳ್ಳ ಗ್ರಾಮದ ಕಂದ್ರಪ್ಪಾಡಿಯ ನಿವಾಸಿ ಪುತ್ತೂರು ಸುದ್ದಿ ಬಿಡುಗಡೆಯ ಹಿರಿಯ ಸಿಬಂದಿ ತಾರಾನಾಥ್ ಹೊಸೊಳಿಕೆ ಮತ್ತು ಜಯಂತಿ ದಂಪತಿ ಪುತ್ರಿ. ನೃತ್ಯೋಪಾಸನಾ ಕಲಾ ಅಕಾಡೆಮಿ ಪುತ್ತೂರು ಇಲ್ಲಿನ ನೃತ್ಯ ಗುರು ವಿದುಷಿ ಶಾಲಿನಿ ಆತ್ಮಭೂಷಣ್‌ರವರಲ್ಲಿ ನೃತ್ಯ ತರಬೇತಿ ಪಡೆದುಕೊಂಡಿದ್ದಾರೆ.










