ಎನ್ನೆಂಸಿ ವಿಜ್ಞಾನ ಸಂಘದ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ ಮತ್ತು ವಿಶೇಷ ವಿಜ್ಞಾನ ಉಪನ್ಯಾಸ

0

ನೆಹರೂ ಮೆಮೋರಿಯಲ್ ಕಾಲೇಜು ಸುಳ್ಯ ಇಲ್ಲಿನ ವಿಜ್ಞಾನ ಸಂಘ ಇದರ 2025-26ನೇ ಸಾಲಿನ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ ಸೆ. 11 ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಅಸ್ಟ್ರೋ ಫಿಸಿಕ್ಸ್ (IIA) ಇಲ್ಲಿನ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದಲ್ಲಿ ಸಂಶೋಧನಾ ವಿದ್ಯಾರ್ಥಿ ಯಾಗಿರುವ ಕು. ಸವಿತಾ ಎಂ.ಎಸ್ ದೀಪ ಬೆಳಗಿಸಿ ವೈಜ್ಞಾನಿಕವಾಗಿ ರಾಸಾಯನಿಕ ವಸ್ತುಗಳನ್ನು ಬಳಸಿ ಕೆಂಪು ಬಣ್ಣದ ವಿಜ್ಞಾನ ವಾಕ್ಯ ರಚಿಸಿ ವಿನೂತನ ರೀತಿಯಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಸೂರ್ಯ ಮತ್ತು ಭೂಮಿಯ ಮೇಲೆ ಜೀವನ ಮತ್ತು ತಂತ್ರಜ್ಞಾನವನ್ನು ರೂಪಿಸುವಲ್ಲಿ ಇದರ ಮಹತ್ವ ವಿಷಯದ ಕುರಿತಾಗಿ ವಿವರಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಆಡಳಿತ ಅಧಿಕಾರಿಯಾಗಿರುವ ಚಂದ್ರಶೇಖರ ಪೇರಾಲು ಸಂಘದ ಮುಂದಿನ ಚಟುವಟಿಕೆಗಳಿಗೆ ಶುಭಾಶಯ ಕೋರಿದರು.
ವೇದಿಕೆಯಲ್ಲಿ ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ರತ್ನಾವತಿ ಡಿ, ಕಾಲೇಜು ಐಕ್ಯೂಎಸಿ ಸಂಯೋಜಕರಾದ ಡಾ ಮಮತಾ ಕೆ, ವಿಜ್ಞಾನ ವಿಭಾಗದ ಸಂಯೋಜಕರಾದ ಪ್ರೊ. ಸತ್ಯಪ್ರಕಾಶ್ ಡಿ, ವಿಜ್ಞಾನ ಸಂಘದ ಕಾರ್ಯದರ್ಶಿ ಗೌತಮ್ ಎ.ಎಚ್ ಉಪಸ್ಥಿತರಿದ್ದರು.

ವಿಜ್ಞಾನ ಸಂಘದ ಸದಸ್ಯರಾದ ಕು. ಅಕ್ಷತ ಮತ್ತು ಕು. ಮನಸ್ವಿ ಪ್ರಾರ್ಥಿಸಿ, ವಿಜ್ಞಾನ ಸಂಘದ ಅಧ್ಯಕ್ಷೆ ಕು. ಸಚಿತ್ರಾ ಸ್ವಾಗತಿಸಿ, ಕು. ಜೀಷ್ಮ ವಂದಿಸಿದರು. ವಿಜ್ಞಾನ ಸಂಘದ ಸಂಯೋಜಕರಾದ ಭೌತಶಾಸ್ತ್ರ ವಿಭಾಗದ ಉಪನ್ಯಾಸಕಿ ಅಶ್ವಿನಿ ಕೆ.ಸಿ ಪ್ರಾಸ್ತಾವಿಕ ಮಾತನಾಡಿದರು. ವಿಜ್ಞಾನ ಸಂಘದ ಸದಸ್ಯರಾದ ಕು. ಕವನ ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿ, ಕು. ಶಿವಾನಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಯಶಸ್ಸಿಗೆ ಉಪನ್ಯಾಸಕರಾದ ಉಷಾ ಎಂ.ಪಿ, ಸಂಜೀವ ಕೆ, ಕುಲದೀಪ್, ಕೃತಿಕಾ, ಪಲ್ಲವಿ, ಅಭಿಜ್ಞಾ, ಜಿತೇಶ್ ಮತ್ತು ಭಾವನಾ ಹಾಗೂ ಸಿಬ್ಬಂದಿಗಳಾದ ಜಯಂತಿ, ಸೌಮ್ಯ, ಗೀತಾ, ಭವ್ಯ ಮತ್ತು ಶಿವಾನಂದ ಹಾಗೂ ಎಲ್ಲಾ ವಿದ್ಯಾರ್ಥಿಗಳು ಸಹಕರಿಸಿದರು.