ಕರ್ನಾಟಕ ರಾಜ್ಯ ಭಾವೈಕ್ಯತಾ ಪರಿಷತ್ ನವರು ಮಂಗಳೂರಿನ ದೇವರಕಟ್ಟೆಯ ಸಭಾಂಗಣದಲ್ಲಿ ಸೆ. 14 ರಂದು ಆಯೋಜಿಸಿರುವ ರಾಜ್ಯಮಟ್ಟದ ಚುಟುಕು ಕವಿಗೋಷ್ಠಿ ಸಮಾರಂಭದಲ್ಲಿ ಸುಳ್ಯದ ಸಾಹಿತಿ ಮತ್ತು ಜ್ಯೋತಿಷಿ ಹಾಗೂ ಕರ್ನಾಟಕ ರಾಜ್ಯ ಭಾವೈಕ್ಯತಾ ಪರಿಷತ್ ನ ಪ್ರಧಾನ ಕಾರ್ಯದರ್ಶಿ ಶ್ರೀ ಎಚ್ ಭೀಮರಾವ್ ವಾಷ್ಠರ್ ಅವರಿಗೆ ಅಭಿನಂದನಾ ಸನ್ಮಾನ ಮತ್ತು ಬೀಳ್ಕೊಡುಗೆ ಸಮಾರಂಭ ಕಾರ್ಯಕ್ರಮವು ನಡೆಯಲಿದೆ.















ವಿಧಾನಸೌಧ ಸಭಾಧ್ಯಕ್ಷ ಸ್ಪೀಕರ್ ಯು ಟಿ ಖಾದರ್ ರವರು ಭೀಮರಾವ್ ವಾಷ್ಠರ್ ಅವರನ್ನು ಸನ್ಮಾನಿಸಲಿದ್ದಾರೆ. 25 ವರ್ಷಗಳ ಕಾಲ ಸುಳ್ಯದಲ್ಲಿದ್ದು ತಮ್ಮ ವಾಸ್ತವ್ಯವನ್ನು ಬೆಂಗಳೂರಿಗೆ ತೆರಳಿದ ಇವರು ನೂರಾರು ಜನ ಕವಿಗಳಿಗೆ ಮತ್ತು ಕಲಾವಿದರಿಗೆ ಬೆಳಕಿಗೆ ತಂದು ಸನ್ಮಾನ, ಪ್ರಶಸ್ತಿಗಳ ಮೂಲಕ ಪ್ರೋತ್ಸಾಹಿಸಿ ಸಾಹಿತ್ಯ, ಸಂಗೀತ ಮತ್ತು ಜ್ಯೋತಿಷ್ಯ ಸೇವೆಯ ನೆಲೆಯಲ್ಲಿ ಇವರಿಗೆ ಗೌರವಿಸಿ ಬೆಂಗಳೂರಿಗೆ ಬೀಳ್ಕೊಡಲಾಗುವದು ಎಂದು ಸಂಸ್ಥೆಯ ಗೌರವಾಧ್ಯಕ್ಷ ನಿವೃತ್ತ ಡಿಸಿಪಿ ಜಿ ಎ ಬಾವಾ ಅವರ ನೇತೃತ್ವದಲ್ಲಿ ಅದ್ದೂರಿ ಸಮಾರಂಭ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ಭಾವೈಕ್ಯತಾ ಪರಿಷತ್ ನ ರಾಜ್ಯಾಧ್ಯಕ್ಷ ಇಕ್ಬಾಲ್ ಬಾಳಿಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.










