ಬೆಳ್ಳಾರೆಯಿಂದ ಪೆರುವಾಜೆವರೆಗೆ ಬೃಹತ್ ಸ್ವಚ್ಛತಾ ಆಂದೋಲನ

0


ಜೇಸಿಐ ಬೆಳ್ಳಾರೆಯ ಜೇಸಿ ಸಪ್ತಾಹ ‘ಸಪ್ತರ್ಷಿ 2025’ ಅಂಗವಾಗಿ ಪೆರುವಾಜೆ ಡಾ.ಕೆ ಶಿವರಾಮ ಕಾರಂತ ಪ್ರಥಮ ದರ್ಜೆ ಕಾಲೇಜಿನ ಎನ್ನೆಸ್ಸೆಸ್ಸ್ ಮತ್ತು ಬೆಳ್ಳಾರೆ ಶೌರ್ಯ ವಿಪತ್ತು ಘಟಕದ ಸಹಯೋಗದಲ್ಲಿ ಬೆಳ್ಳಾರೆಯ ಮಾಸ್ತಿಕಟ್ಟೆಯಿಂದ ಪೆರುವಾಜೆವರೆಗೆ ಬೃಹತ್ ಸ್ವಚ್ಛತಾ ಆಂದೋಲನ ನಡೆಯಿತು.ಪೆರುವಾಜೆ ಡಾ.ಕೆ ಶಿವರಾಮ ಕಾರಂತ ಪ್ರಥಮ ದರ್ಜೆ ಕಾಲೇಜಿನ ಎನ್ನೆಸ್ಸೆಸ್ಸ್ ವಿದ್ಯಾರ್ಥಿಗಳು ಮತ್ತು ಬೆಳ್ಳಾರೆ ಶೌರ್ಯ ವಿಪತ್ತು ಘಟಕದ ಸದಸ್ಯರು ಸ್ವಚ್ಛತಾ ಕಾರ್ಯದಲ್ಲಿ ಸಹಕರಿಸಿದರು.

ಬಳಿಕ ಪೆರುವಾಜೆ ಶ್ರೀ ಜಲದುರ್ಗಾ ದೇವಿ ದೇವಸ್ಥಾನದ ಮುಂಭಾಗದಲ್ಲಿ ನಡೆದ ಸಮಾರಂಭದಲ್ಲಿ ಪೆರುವಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪೆರುವಾಜೆ ಒಕ್ಕೂಟದ ಅಧ್ಯಕ್ಷ ಸುಂದರ ನಾಯ್ಕ, ಬೆಳ್ಳಾರೆ ಶೌರ್ಯ ವಿಪತ್ತು ಘಟಕದ ಸಂಯೋಜಕ ರಮೇಶ್ ಮಠತ್ತಡ್ಕ, ಪೆರುವಾಜೆ ಡಾ.ಕೆ ಶಿವರಾಮ ಕಾರಂತ ಪ್ರಥಮ ದರ್ಜೆ ಕಾಲೇಜಿನ ಎನ್ನೆಸ್ಸೆಸ್ಸ್ ಅಧಿಕಾರಿ ಗಿರೀಶ್ ಸಿ ಆರ್, ಬೆಳ್ಳಾರೆ ಜೇಸಿಐನ ನಿಕಟಪೂರ್ವಧ್ಯಕ್ಷ ಜಗದೀಶ್ ರೈ ಪೆರುವಾಜೆ ಉಪಸ್ಥಿತರಿದ್ದರು. ಅಧ್ಯಕ್ಷ ಪ್ರದೀಪ್ ಕುಮಾರ್ ರೈ ಬೀಡು ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಉಮೇಶ್ ಮಣಿಕ್ಕಾರ ವಂದಿಸಿದರು.