ಸುಬ್ರಹ್ಮಣ್ಯದ ಎಸ್ ಎಸ್ ಪಿ ಯು ವಿದ್ಯಾಸಂಸ್ಥೆಯಲ್ಲಿ ಸೆ. 11ರಂದು ನಡೆದ 14ರ ವಯೋಮಾನದ ಯೋಗ ಸ್ಪರ್ಧೆಯಲ್ಲಿ ಸುಳ್ಯದ ಸೈಂಟ್ ಜೋಸೆಫ್ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.















ಬಾಲಕಿಯರ ವಿಭಾಗದಲ್ಲಿ ಆರ್ಟಿಸ್ಟಿಕ್ ವೈಯಕ್ತಿಕ ವಿಭಾಗದಲ್ಲಿ ಹಾರ್ದಿಕ 7ನೇ ಪ್ರಥಮ, ಟ್ರೆಡಿಶನಲ್ ವಿಭಾಗ ಸೋನಾ ಅಡ್ಕಾರ್, ಆರ್ಟಿಸ್ಟಿಕ್ ಡಬಲ್ಸ್ ಹಾಗೂ ತಾಳಬದ್ದ ಡಬಲ್ಸ್ ವಿಭಾಗದಲ್ಲಿ ಹಾರ್ದಿಕ 7 ನೇ ಹಾಗೂ ಸೋನಾ ಅಡ್ಕಾರ್ 7 ನೇ ಪ್ರಥಮ, ಬಾಲಕರ ವಿಭಾಗದಲ್ಲಿ ಶ್ರೀಶೌರ್ಯ 6 ನೇ ಟ್ರಡಿಷನಲ್ ವಿಭಾಗ ಪ್ರಥಮ, ಆರ್ಟಿಸ್ಟಿಕ್ ವೈಯಕ್ತಿಕ ತೃತೀಯ, ಆರ್ಕಿಸ್ಟಿಕ್ ಡಬಲ್ಸ್ ಶ್ರೀಶೌರ್ಯ 6ನೇ ಮತ್ತು ಅಕ್ಷರ್ 6ನೇ ಪ್ರಥಮ, ತಾಳಬದ್ಧ ಡಬಲ್ಸ್ ಅಕ್ಷರ್ 6ನೇ ಮತ್ತು ಪ್ರವೀಣ 6ನೇ ದ್ವಿತೀಯ ಸ್ಥಾನ ಪಡೆದುಕೊಂಡಿರುತ್ತಾರೆ.
ಪ್ರಥಮ ಸ್ಥಾನವನ್ನು ಪಡೆದಂತಹ ಎಲ್ಲಾ ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಸಂಸ್ಥೆಯ ಜೊತೆ ಕಾರ್ಯದರ್ಶಿ ಓಲ್ವಿನ್ ಎಡ್ವರ್ಡ್ ಡಿ ಕುನ್ಹ, ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಮೇರಿ ಸ್ಟೆಲ್ಲಾ ಇವರ ಮಾರ್ಗದರ್ಶನದಲ್ಲಿ ಸಂತೋಷ್ ಮುಂಡಕಜೆ ಹಾಗೂ ಶ್ರೀಮತಿ ಪ್ರಶ್ವಿಜ ಯೋಗ ತರಬೇತು ನೀಡಿ , ದೈಹಿಕ ಶಿಕ್ಷಣ ಶಿಕ್ಷಕರಾದ ಪುಷ್ಪವೇಣಿ ಹುದೇರಿ, ಕೊರಗಪ್ಪ ಬೆಳ್ಳಾರೆ, ತಂಡದ ವ್ಯವಸ್ಥಾಪಕರಾಗಿ ಶಿಕ್ಷಕಿ ವಿದ್ಯಾಸರಸ್ವತಿ ಸಹಕರಿಸಿದರು.










