ಫೈನಾನ್ಸ್ ನವರ ನಿರಂತರ ಕಿರುಕುಳದಿಂದ ನೊಂದು ವಿಷ ಪ್ರಾಷನ ಮಾಡಿರುವ ಮಾವಿನಕಟ್ಟೆಯ ಭಾನುಪ್ರಕಾಶ್ ರವರನ್ನು ಪುತ್ತೂರಿನ ಅರುಣ್ ಕುಮಾರ್ ಪುತ್ತಿಲ ಭೇಟಿ ನೀಡಿದರು.
















ಅವರು ಇಂದು ಸಂಜೆ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಭಾನುಪ್ರಕಾಶ್ ರವರಿಗೆ ಧೈರ್ಯದ ಮಾತುಗಳನ್ನಾದಿದ್ದಾರೆ.
ಬಳಿಕ ಸುದ್ದಿಯೊಂದಿಗೆ ಮಾತನಾಡಿ ಕಲ್ಲು, ಹೊಯಿಗೆ ಗಳಿಗೆ ನಿರ್ಬಂಧ ಹೇರಿ ಅನೇಕ ಕುಟುಂಬಗಳು ಬೀದಿ ಪಾಲು ಆಗುವಂತೆ ಸರಕಾರ ಮಾಡಿದೆ. ಅನೇಕ ಕಾರ್ಮಿಕ ವರ್ಗಕ್ಕೆ ಕೆಲಸ ಇಲ್ಲದಂತಾಗಿದೆ. ಜೀವನ ನಿರ್ವಹಣೆಗಾಗಿ ಲಾರಿಯಲ್ಲಿ ದುಡಿಯುತ್ತಿರುವವರಿಗೆ ಈಗ ಲೋನ್ ಕಟ್ಟದ ಪರಿಸ್ಥಿತಿ ಎದುರಾಗಿದೆ. ಇದನ್ನೇ ಬಳಸಿಕೊಂಡು ಬ್ಯಾಂಕ್ ನವರು ಫೈನಾನ್ಸ್ ನವರು ಮನೆಗೆ ಬಂದು ಕಿರುಕುಳ ನೀಡುತ್ತಿದ್ದಾರೆ. ಇದನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು. ಲಾರಿ ಮಾಲಕರೊಬ್ಬರು ವಿಷ ಪ್ರಾಷನ ಮಾಡಿರುವುದು ನೋವಿನ ಸಂಗತಿ. ಯಾರು ಈ ರೀತಿಯ ಯೋಚನೆ ಗೆ ಹೋಗಬಾರದು. ರೀತಿ ನಡೆಯದಂತೆ ಸರಕಾರ ಗಂಭೀರ ಯೋಚನೆ ಮಾಡಬೇಕು ಎಂದರು.










