ಯು.ಇ.ಎ. ನೇತೃತ್ವದಲ್ಲಿ ಮಂಗಳೂರಿನಲ್ಲಿ ನಡೆದ ಕಮ್ಯೂನಿಟಿ ಯೂತ್ ಲೀಡರ್ಸ್ ಮೀಟ್ 2025

0

ಸುಳ್ಯದ ನೂರಾರು ಮಂದಿ ಕಾರ್ಯಕರ್ತರು ಹಾಗೂ ಮುಖಂಡರುಗಳು ಭಾಗಿ

ಯುನೈಟೆಡ್ ಎಂಪವರ್ ಮೆಂಟ್ ಅಸೋಸಿಯೇಶನ್ (ಯು ಇ ಎ) ಇದರ ನೇತೃತ್ವದಲ್ಲಿ ಸೆ.12 ರಂದು ಮಂಗಳೂರು ಇಂಡಿಯಾನ ಕಾನ್ವೆನ್ಷನ್ ಸೆಂಟರ್ ನಲ್ಲಿ ಕಮ್ಯೂನಿಟಿ ಯೂತ್ ಲೀಡರ್ಸ್ ಮೀಟ್ 2025 ಬಹಳ ಅದ್ದೂರಿಯಾಗಿ ನಡೆಯಿತು.


ಈ ಕಾರ್ಯಕ್ರಮದಲ್ಲಿ ಸುಳ್ಯ ಝೋನ್ ಸಮಿತಿಯ ನೂರಾರು ಮಂದಿ ಕಾರ್ಯಕರ್ತರು ಹಾಗೂ ಮುಖಂಡರುಗಳು ಭಾಗವಹಿಸಿದ್ದರು.ಯು.ಇ.ಎ. ರಾಜ್ಯ ಸಮಿತಿ ಸದಸ್ಯ ಶರೀಫ್ ಕಂಠಿ ಹಾಗೂ ಸುಳ್ಯ ಝೋನ್ ಸಮಿತಿ ಅಧ್ಯಕ್ಷ ಫೈಝಲ್ ಕಟ್ಟೆಕ್ಕಾರ್ಸ್ ರವರ ನೇತೃತ್ವ ದಲ್ಲಿ ಸುಳ್ಯದಿಂದ ನೂರಾರು ಮಂದಿ ತೆರಳಿದ್ದರು.

ಮಂಗಳೂರು, ಪಡುಬಿದ್ರಿ , ಉಳ್ಳಾಲ, ಬಂಟ್ವಾಳ, ವಿಟ್ಲ, ಪುತ್ತೂರು, ಬೆಳ್ತಂಗಡಿ, ಕೈಕಂಬ- ಬಜ್ಪೆ, ಮೂಡಬಿದ್ರಿ ಕಾರ್ಕಳ , ಸುಳ್ಯ , ಸುರತ್ಕಲ್ , ಜೋಕಟ್ಟೆ ಕಾಪು , ಉಪ್ಪಿನಂಗಡಿ , ಫರಂಗಿಪೇಟೆ , ಶಿರೂರ್ , ಮತ್ತು ಕುಂದಾಪುರ ವಲಯ ವ್ಯಾಪ್ತಿಯ ಯುವಕರನ್ನು ಒಟ್ಟುಗೂಡಿಸಿ ಯುವ ನಾಯಕತ್ವ, ವೃತ್ತಿ ಮಾರ್ಗದರ್ಶನ ಮತ್ತು ಸಮಾಜ ನಿರ್ಮಾಣದಲ್ಲಿ ಯುವಕರ ಪಾತ್ರವನ್ನು ಬಲಪಡಿಸುವ ಉದ್ದೇಶದಿಂದ ಕಮ್ಯೂನಿಟಿ ಯೂತ್ ಲೀಡರ್ಸ್ ಮೀಟ್ -2025 ನ್ನು ಅನ್ನುವ ಈ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಸಮಿತಿ ಅಧ್ಯಕ್ಷರು ಸಭೆಯಲ್ಲಿ ಮಾಹಿತಿ ನೀಡಿದರು.
ರಾಜ್ಯ ಹೆಲ್ತ್ ಕೌನ್ಸಿಲ್ ಅಧ್ಯಕ್ಷ ಯು ಟಿ ಇಫ್ತಿಕಾರ್, ವಿಧಾನ ಪರಿಷತ್ ಮಾಜಿ ಸದಸ್ಯ ಬಿ ಎಂ ಫಾರೂಕ್, ವೈಟ್ ಸ್ಟೋನ್ ಸಿ ಈ ಓ ಶರೀಫ್, ಜಿಲ್ಲಾ ವಖ್ಫ್ ಬೋರ್ಡ್ ಅಧ್ಯಕ್ಷ
ನಾಸಿರ್ ಲಕ್ಕಿ ಸ್ಟಾರ್,ಮುಖಂಡರು ಗಳಾದ ಡಾ.ವಿ ಕೆ ಅಬ್ದುಲ್ ಬಷೀರ್,ಪೊಲೀಸ್ ಅಧಿಕಾರಿ ಸಲೀಂ ವಳಾಲ್, ಸಲೀಂ ಹಾಜಿ,ಹನೀಫ್ ಹಾಜಿ, ಆಶೀಫ್ ದ್ದೀನ್, ಮೋತಿಜಮ್, ಅನ್ವರ್ ಸಾದತ್ ಬಜೆತ್ತೂರು, ಹಫೀಜ್ ಸಾಸ್ಕೊ, ಶಾಹುಲ್ ಹಮೀದ್,ಮುಝಫರ್, ಮೊಹಮ್ಮದ್ ಅನ್ಸಿಫ್,
ಚಿಂತಕ ಇಕ್ಬಾಲ್ ಬಾಳಿಲ,
ಜಮೀಲ್ ಕೃಷ್ಣಾಪುರ, ಹನೀಫ್ ಖಾನ್ ಕೊಡಾಜೆ, ಸಮೀರ್ ಎಂ ಎಸ್, ಬ್ಲಾಗರ್ ಯಾಶೀರ್,ಸನ್ಮಾರ್ಗ ಪತ್ರಿಕೆಯ ಎ ಕೆ ಕುಕ್ಕಿಲ, ಎಸ್ ಎಂ ಫಾರೂಕ್, ನವಾಜ್, ಸಿದ್ದೀಕ್ ಉಳ್ಳಾಲ, ಸಕೀಮ್ ಮಕಾವಿ,ಎಚ್ ಕೆ ಖಾದರ್, ಎ ಕೆ ಜಮಾಲ್,ನಾಸಿರ್ ಸಮಾಣಿಕೆ, ಹಂಝ, ಅಬ್ಬಾಸ್ ಅಲಿ, ಫಾರೂಕ್ ಚಂದ್ರನಗರ್, ಅಬ್ದುಲ್ ರಜ್ಜಾಕ್ ಪುತ್ತೂರು,ಕೆ ಎಂ ಮುಸ್ತಫಾ ಸುಳ್ಯ,ಕೆ ಬಿ ಇಬ್ರಾಹಿಂ,ಸಲೀಂ ಪೆರುಂಗೋಡಿ ಸುಳ್ಯ,ಅಬ್ದುಲ್ ಕಲಾಂ ಸುಳ್ಯ, ಸಿದ್ದೀಕ್ ಕೊಕ್ಕೋ, ಮಹಮ್ಮದ್ ಕುಕ್ಕುವಳ್ಳಿ ಸೇರಿದಂತೆ ಹಲವು ಮಂದಿ ಗಣ್ಯರು ಉಪಸ್ಥಿತರಿದ್ದರು.

ಸಮುದಾಯದ ಸಬಲೀಕರಣ,ಅಭಿವೃದ್ಧಿಯ ತ್ತ ಕೊಂಡು ಹೋಗುವ,
ಸಮುದಾಯದ ಕ್ರೀಡಾ ಪಟುಗಳನ್ನು ಪ್ರೋತ್ಸಾಹಿಸಿ ಸಿದ್ದಪಡಿಸಿ ಸ್ಪರ್ಧಾತ್ಮಕ ಮಟ್ಟದಲ್ಲಿ ಬೆಳೆಸುವ ಬಗ್ಗೆ ನಮ್ಮ ಸಂಪೂರ್ಣ ಈ ಸಮಿತಿಯೊಂದಿಗೆ ಇರುತ್ತದೆ ಮತ್ತು ಸಮುದಾಯದ ಯುವಕರನ್ನು ಮಾದಕ ವ್ಯಸನದಿಂದ ರಕ್ಷಣೆ ಮತ್ತು ಜಾಗೃತಿ ಗೊಳಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಬಗ್ಗೆ ಎಲ್ಲಾ ಅತಿಥಿಗಳು ಮಾತನಾಡಿದರು.

ಸುಳ್ಯ ಝೋನ್ ಕಾರ್ಯದರ್ಶಿ ಮುನಾಫ್ , ಇಕ್ಬಾಲ್ ಸುಣ್ಣಮೂಲೆ , ಮನೀಶ್ ಶೈನ್ ,ಮುನೀರ್ ಶೈನ್ ,ಅಬ್ಬುಸಾಲಿ ಪೈಚಾರ್ ,ಸಿದ್ದಿಕ್ಕ್ , ನಿಯಾಝ್ ಶೈನ್,ಸಮೀರ್ ಮೊಬೈಲ್ ಹಾರ್ಟ್,ಲತೀಫ್ ಅಡ್ಕಾರ್, ಅಬ್ದುಲ್ ರಹಿಮಾನ್ ಅದ್ದುಚ್ಚ, ಹಮೀದ್ ಅಡ್ಕರ್, ಸಿದ್ದೀಕ್, ಸಮೀರ್,ಆಬಿದ್ ಪೈಚಾರ್, ಕಯ್ಯುಮ್ ಅಡ್ಕರ್, ಮಿಸ್ಬ ಹಾಗೂ ನೂರಾರು ಮಂದಿ ಭಾಗವಹಿಸಿದ್ದರು.