ನ. 5 ರಂದು ನಿಡ್ವಾಳ ದೇಗುಲದಲ್ಲಿ ಶ್ರೀ ಮಹಾವಿಷ್ಣು ಮಹಾಯಾಗ

0

ಕೋಡಿ ಶ್ರೀಗಳ ಉಪಸ್ಥಿತಿ, ಸಹಸ್ರಾರು ಭಕ್ತರ ಆಗಮನ ನಿರೀಕ್ಷೆ

ಪೂರ್ವಭಾವಿ ಸಭೆ: ಸೆ.27 ರಂದು ವಿಶೇಷ ಸಭೆ

ಕರಿಕ್ಕಳದ ಎಣ್ಮೂರು-ಐವತ್ತೊಕ್ಲು
ನಿಡ್ವಾಳ ಶ್ರೀ ಮಹಾವಿಷ್ಣು ದೇಗುಲದ ಜೀರ್ಣೋದ್ಧಾರ ಕಾರ್ಯ ಭರದಿಂದ ನಡೆಯುತ್ತಿದೆ. ಶ್ರೀ ಕ್ಷೇತ್ರದಲ್ಲಿ ಲೋಕ ಕಲ್ಯಾಣಾರ್ಥವಾಗಿ ಹಾಗೂ 2026ನೇ ಎಪ್ರಿಲ್ ತಿಂಗಳಲ್ಲಿ ದೇವಾಲಯದ ಲೋಕಾರ್ಪಣೆಯ ಪೂರ್ವಭಾವಿಯಾಗಿ ನ.5 ರಂದು ಕೋಡಿಮಠ ಮಹಾ ಸಂಸ್ಥಾನದ ಶ್ರೀ ಶ್ರೀ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ರವರ ದಿವ್ಯ ಉಪಸ್ಥಿತಿಯಲ್ಲಿ, ಕ್ಷೇತ್ರದ ತಂತ್ರಿಗಳಾದ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ
ಶ್ರೀ ಮಹಾವಿಷ್ಣು ಮಹಾಯಾಗ
ನಡೆಸಲು ನಿರ್ಧರಿಸಲಾಗಿದೆ.

ಈ ಕುರಿತ ಪೂರ್ವಭಾವಿ ಸಭೆ ಸೆ.13 ರಂದು ದೇವಳದಲ್ಲಿ ನಡೆಯಿತು. ಶ್ರೀ ಮಹಾವಿಷ್ಣು ಮಹಾಯಾಗ ಲೋಕ ಕಲ್ಯಾಣಕ್ಕೆ ವಿಶೇಷ ಯಾಗ ಆಗಿದ್ದು ನಾಡಿನಾದ್ಯಂತ ಮಾಧ್ಯಮ ಮೂಲಕ ಭಕ್ತಾದಿಗಳ ಗಮನಕ್ಕೆ ತರುವ ಕಾರ್ಯ ನಡೆಯಲಿದೆ. ಭಾರೀ ಭಕ್ತಾದಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದ್ದು.
ಈ ಕುರಿತು
ಸೆ.27 ರಂದು ಅಪರಾಹ್ನ 2 ಗಂಟೆಗೆ
ವಿಶೇಷ ಸಭೆ ನಡೆಯಲಿದೆ.

ಶ್ರೀ ಮಹಾವಿಷ್ಣು ಯಾಗ ಸಮಿತಿ ಅಧ್ಯಕ್ಷ ಡಾ| ರವಿ ಕಕ್ಕೆಪದವು ಕುಕ್ಕೆ ಸುಬ್ರಹ್ಮಣ್ಯ, ಪ್ರಧಾನ ಕಾರ್ಯದರ್ಶಿ ಚಂದ್ರಪ್ರಕಾಶ್ ಕಂಬಳ , ದೇವಳದ ಪುನರ್ ನಿರ್ಮಾಣ ಸಮಿತಿ ಅಧ್ಯಕ್ಷ ನೇಮಿರಾಜ ಪಲ್ಲೋಡಿ, ಶ್ರೀ ಮಹಾವಿಷ್ಣು ಯಾಗ ಸಮಿತಿ ಸಂಚಾಲಕ ವಿ ಜೆ ವಿಖ್ಯಾತ್ ಸುಳ್ಯ , ಜತೆ ಕಾರ್ಯದರ್ಶಿ ಶ್ರೀಮತಿ ನಳಿನಾಕ್ಷಿ ಎಂ. ಪಂಜ, ಗೌರವ ಸಲಹೆಗಾರರಾದ ಮಹೇಶ್ ಕುಮಾರ್ ಕರಿಕಳ ,ಡಾ. ದೇವಿಪ್ರಸಾದ್ ಕಾನತ್ತೂರ್, ಪ್ರಧಾನ ಆರ್ಚಕ ಅಕ್ಷಯ್ ಬರ್ಲಾಯಬೆಟ್ಟು, ಖಜಾಂಜಿ ಪ್ರಶಾಂತ್ ಅಲೆಂಗಾರ, ಸಮಿತಿಯ ಸದಸ್ಯರು, ಆಡಳಿತ ಮಂಡಳಿ ಸದಸ್ಯರು , ಪುನರ್ ನಿರ್ಮಾಣ ಸಮಿತಿ ಸದಸ್ಯರು , ಭಕ್ತಾದಿಗಳು ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ಚಂದ್ರಪ್ರಕಾಶ್ ಸ್ವಾಗತಿಸಿದರು. ನೇಮಿರಾಜ ಪಲ್ಲೋಡಿ ವಂದಿಸಿದರು.