ಜಾಲ್ಸೂರಿನ ನಂಗಾರಿನ ಪ್ರಸ್ತುತ ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ರಾಮಣ್ಣ ಗೌಡರ ಪುತ್ರ ಸುಧಿನ್ ರವರು ಹೃದಯಾಘಾತದಿಂದ ಸೆ. 14ರಂದು ಆಸ್ಟ್ರೇಲಿಯಾದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಅವರಿಗೆ 46 ವರ್ಷ ವಯಸ್ಸಾಗಿತ್ತು.















ಉದ್ಯೋಗ ನಿಮಿತ್ತ ಹಲವು ವರ್ಷಗಳ ಹಿಂದೆ ಆಸ್ಟ್ರೇಲಿಯಕ್ಕೆ ಹೋಗಿ ನೆಲೆಸಿರುವ ಸುಧಿನ್ ರವರು ಅಲ್ಲಿ ಖಾಸಗಿ ಕಂಪೆನಿಯಲ್ಲಿ ಇಂಜಿನಿಯರ್ ಆಗಿದ್ದರು.
ಸೆ. 11ರಂದು ಮನೆಯಲ್ಲಿರುವಾಗ ಹೃದಯಾಘಾತಕ್ಕೆ ಒಳಗಾದ ಅವರನ್ನು ಅಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸೆ. 14ರಂದು ಮುಂಜಾನೆ ನಿಧನರಾದರು.
ಮೃತರು ತಂದೆ ರಾಮಣ್ಣ ಗೌಡ ನಂಗಾರು, ಪತ್ನಿ ಶ್ರೀಮತಿ ಶಾಲಿನಿ, ಪುತ್ರಿ ತನಿಷ್ಕ, ಸಹೋದರಿಯನ್ನು ಅಗಲಿದ್ದಾರೆ.










