ಸುಳ್ಯ ನಗರದಲ್ಲಿ ಪಾದಚಾರಿಗಳಿಗೆ ಕಂಟಕ ಪ್ರಾಯವಾಗಿರುವ ಪುಟ್ಪಾತ್…

0

ತುಂಡರಿಸಿ ಹಾನಿ ಮಾಡಿದ ರಸ್ತೆ ಹಾಗೂ ಸುಳ್ಯನಗರದಲ್ಲಿ ಪಾದಚಾರಿಗಳಿಗೆ ಕಂಟಕ ಪ್ರಾಯವಾಗಿರುವ ಪುಟ್ಪಾತ್… ಸ್ಯ್ಲಾಬ್ ಗಳನ್ನು ಸರಿ ಪಡಿಸಿ…
ಸಾರ್ವಜನಿಕರ
ಒಕ್ಕೊರಳ ಆಗ್ರಹ

ಸುಳ್ಯ ನಗರದ ವ್ಯಾಪ್ತಿಯಲ್ಲಿರುವ ರಾಜ್ಯ ಹೆದ್ದಾರಿ ಬದಿಯಲ್ಲಿ ಪುಟ್ಪಾತಿಗೆ ಅಳವಡಿಸಲಾಗಿರುವ
ಸ್ಲ್ಯಾಬ್ ಗಳು ಅಲ್ಲಲ್ಲಿ ಕುಸಿತಗೊಂಡಿದ್ದು ಕೆಲವು ಕಡೆಗಳಲ್ಲಿ ಬಿರುಕು ಬಿಟ್ಟಿದ್ದು ಪಾದಚಾರಿಗಳು ಚರಂಡಿಗೆ ಬಿದ್ದು ಕೈ ಕಾಲಿಗೆ ಗಾಯ ಮಾಡಿಕೊಂಡು ಆಸ್ಪತ್ರೆಗೆ ದಾಖಲಾದ ಘಟನೆಗಳು ನಿರಂತರವಾಗಿ ನಡೆಯುತ್ತಿದೆ.

ಫುಟ್ ಬಾತ್ ನಿರ್ಮಾಣಗೊಂಡ ಬಳಿಕ
ಈ ಸಮಸ್ಯೆತಪ್ಪಿದಲ್ಲ.
ಈ ಬಗ್ಗೆ ಪತ್ರಿಕೆಗಳಲ್ಲಿ ಮಾಧ್ಯಮಗಳಲ್ಲಿ ವರದಿಗಳು ಪದೇ ಪದೇ ಬಿತ್ತರಗೊಂಡರು ಇನ್ನು ಕೂಡ ಸಮರ್ಪಕ ರೀತಿಯಲ್ಲಿ ಫುಟ್ಬಾತಿನ ಅಳವಡಿಕೆಯ ವ್ಯವಸ್ಥೆಯು ಸರಿಯಾಗಿಲ್ಲ. ಇದರಿಂದಾಗಿ ನಿತ್ಯವೂ ಪಾದಚಾರಿಗಳು ತುಂಡಾದ ಸ್ಲಾಬ್ ಗಳಿಗೆ ಕಾಲು ಹಾಕಿ ಆಯ ತಪ್ಪಿ ಚರಂಡಿಗೆ ಬಿದ್ದು ಗಾಯ ಮಾಡಿಕೊಂಡು ಇಂದಿಗೂಗುಣಮುಖರಾಗದೆ ನರಕ ಯಾತನೆ ಅನುಭವಿಸುತ್ತಿದ್ದಾರೆ.
ಸೆ.13 ರಂದು ರಾತ್ರಿ
ಶ್ರೀರಾಮಪೇಟೆಯಲ್ಲಿ
ವ್ಯಕ್ತಿಯೊಬ್ಬರು ರಸ್ತೆ ಬದಿ ಊಟಕ್ಕೆಂದು ಕಾರು ನಿಲ್ಲಿಸಿ ಹೋಗುತ್ತಿರುವ ಸಂದರ್ಭದಲ್ಲಿ ಇದೇ ರೀತಿಯ ಘಟನೆ ನಡೆದು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಪಟ್ಟಣ ಪ್ರದೇಶದಲ್ಲಿ ಬೀದಿ ದೀಪಗಳು ಕೂಡ ಸರಿಯಾಗಿ ಉರಿಯುತ್ತಿಲ್ಲದೆ ರಾತ್ರಿ ಸಮಯದಲ್ಲಿ ಫುಟ್ಬಾತ್ ನಲ್ಲಿ ನಡೆದಾಡಲು ಸಮಸ್ಯೆ ಎದುರಾಗಿದೆ.
ಅದಲ್ಲದೆ ನಗರ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಅಳವಡಿಕೆಯ ಸಂದರ್ಭದಲ್ಲಿ ಗುತ್ತಿಗೆದಾರರು ಕಾಂಕ್ರಿಟ್ ರಸ್ತೆಗಳನ್ನು ತುಂಡರಿಸಿ ಪೈಪ್ ಲೈನ್ ಹಾಕಿದ್ದಲ್ಲಿ ಮತ್ತೆ ಅದನ್ನು ಸರಿಯಾದ ರೀತಿಯಲ್ಲಿ ಮುಚ್ಚಲ್ಪಡದೆ ಅಪಘಾತಗಳು ಸಂಭವಿಸುತ್ತಿರುತ್ತದೆ.
ರಸ್ತೆಯನ್ನು ತುಂಡರಿಸಿ ಪೈಪ್ ಅಳವಡಿಸಿದ ಬಳಿಕ ಮತ್ತೆ ರಸ್ತೆಯನ್ನು ಅದೇ ರೀತಿಯಾಗಿ ಕಾಂಕ್ರೀಟ್ ಮಾಡಿ ಮುಚ್ಚದೆ ಬಿಟ್ಟು ಹೋಗಿರುವುದರಿಂದವಾಹನ ಅಪಘಾತಗಳು ಆಗಾಗ ನಡೆಯುತ್ತಿದೆ. ಇದರಿಂದ ಸಾರ್ವಜನಿಕರು ಬಹಳ ತೊಂದರೆಅನುಭವಿಸುವಂತಾಗಿದೆ.ಈ ಎಲ್ಲಾ ಸಮಸ್ಯೆಗಳ ಬಗ್ಗೆ ಸ್ಥಳೀಯಾಡಳಿತ ಮುತುವರ್ಜಿ ವಹಿಸಿ ನಗರದಲ್ಲಿರುವ ಸಮಸ್ಯೆಗಳ ಕುರಿತು ಅವಲೋಕನ ನಡೆಸಿ ತಕ್ಷಣಕಾರ್ಯಪ್ರವೃತ್ತರಾಗಬೇಕೆಂದು ಸಾರ್ವಜನಿಕರ ಒಕ್ಕೋರಲ ಆಗ್ರಹವಾಗಿದೆ.