ಅಮರಮುಡ್ನೂರು:ಯು. ಜಿ. ಸಿ. ಕೇಬಲ್ ಅಳವಡಿಕೆಯ ವಿಶೇಷ ಸಭೆ- ಗೈರಾದ ಗುತ್ತಿಗೆದಾರ

0

ಅಸಮಾಧಾನಗೊಂಡ ಸದಸ್ಯರು

ಅಮರಮುಡ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮೆಸ್ಕಾಂ ಇಲಾಖೆಯ
ಯು. ಜಿ. ಸಿ. ವಿದ್ಯುತ್ ಲೈನ್ ಅಳವಡಿಕೆ ಅವೈಜ್ಞಾನಿಕವಾಗಿ ನಡೆದಿದೆ ಈ ಬಗ್ಗೆ ಸಮರ್ಪಕ ಮಾಹಿತಿ ನೀಡಬೇಕೆಂದು
ಸೆ. 6 ರಂದು ನಡೆದ ಗ್ರಾಮ ಸಭೆಯಲ್ಲಿ ಅಸಮಾಧಾನ ವ್ಯಕ್ತವಾಗಿದ್ದು ಗುತ್ತಿಗೆದಾರ ಬಂದು ಸಮಜಾಯಿಷಿಕೆ ನೀಡಬೇಕೆಂದು ಪಂ. ಸದಸ್ಯ ಅಶೋಕ ಚೂಂತಾರು ರವರು ಆಗ್ರಹಿಸಿದ್ದರು.


ಗುತ್ತಿಗೆದಾರ ಬೆಂಗಳೂರಿಗೆ ಹೋಗಿರುವ ಬಗ್ಗೆ ಇಲಾಖೆಯ ಅಧಿಕಾರಿ ತಿಳಿಸಿದ ಮೇರೆಗೆ ಸೆ. 9 ರಂದು ವಿಶೇಷ ಸಭೆ ನಡೆಸುವುದಾಗಿಗ್ರಾಮ ಸಭೆಯಲ್ಲಿ ನಿರ್ಣಯಿಸಲಾಗಿತ್ತು.

ಸೆ. 9 ರಂದು ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಜಾನಕಿ ಯವರ ಅಧ್ಯಕ್ಷತೆಯಲ್ಲಿ ಸಭೆ ಯು ನಡೆಯಿತು.

ಯು. ಜಿ. ಸಿ ಕೆಲಸ ಎಸ್ಟಿಮೇಟ್ ಪ್ರಕಾರ ನಡೆಯುತ್ತಿಲ್ಲ. ಐವರ್ನಾಡು ಮೂಲಕ ಹಾದು ಹೋಗಬೇಕಾಗಿರುವ ಕೇಬಲ್ ಲೈನ್ ಯಾಕಾಗಿ ಅಮರಪಡ್ನೂರು ಮೂಲಕ ಹಾಕಿದ್ದೀರಿ. ಪಂಚಾಯತ್ ಅನುಮತಿ ಪಡೆಯದೆ ನಿಮ್ಮ ಗುತ್ತಿಗೆದಾರರು ತಮಗೆ ಬೇಕಾದ ರೀತಿಯಲ್ಲಿ ಅಸಮರ್ಪಕವಾಗಿ ಕೆಲಸ ಮಾಡಿದ್ದಾರೆ. ಇದರಿಂದ ಪಂಚಾಯತ್ ಸೊತ್ತುಗಳಿಗೆ ಹಾನಿಯಾಗಿದೆ. ಖಾಸಗಿ ಮನೆಯವರು ತೊಂದರೆ ಅನುಭವಿಸಿದ್ದಾರೆ. ರಸ್ತೆ ಬಿಟ್ಟು 3ಮೀಟರ್ ಅಂತರದಲ್ಲಿ ಕೇಬಲ್ ಹಾಕಬೇಕು. ಪಂಚಾಯತ್ ನ ಕುಡಿಯುವ ನೀರಿನ ಪೈಪು ಲೈನ್ ಹಾನಿಯಾಗಿದೆ ಇದಕ್ಕೆಲ್ಲಾ ಪರಿಹಾರದ ವ್ಯವಸ್ಥೆ ಮಾಡಬೇಕು. ಇದಕ್ಕೆಲ್ಲಾ ಗುತ್ತಿಗೆದಾರರು ಬಂದು ಉತ್ತರಿಸಬೇಕು
ಎಂದು ರಾಧಾಕೃಷ್ಣ ಬೊಳ್ಳೂರು, ಅಶೋಕ್ ಚೂಂತಾರು, ರವಿ ಭಟ್, ಕೇಶವ ಕರ್ಮಾಜೆ ಯವರು ಒತ್ತಾಯಿಸಿದರು.

ಇದಕ್ಕೆ ಉತ್ತರಿಸಿದ
ಮೆಸ್ಕಾಂ ಇಲಾಖೆಯ
ಎ. ಇ.ಇ ಹರೀಶ್ ರವರು ಯು. ಜಿ. ಸಿ. ಲೈನ್ ಹಾದು ಹೋಗುವುದರಿಂದ ಈ ಭಾಗದಲ್ಲಿ ವಿದ್ಯುತ್ ಸಬ್ ಸ್ಟೇಷನ್ ನಿರ್ಮಿಸುವ ಯೋಜನೆ ಇದೆ. ಇದರಿಂದಾಗಿ ಈ ಭಾಗದ ವಿದ್ಯುತ್ ಸಮಸ್ಯೆ ಬಗೆ ಹರಿಯುವುದು.
ಎಸ್ಟಿಮೇಟ್ ಪ್ರಕಾರ
ಯು. ಜಿ.ಸಿ ಕೇಬಲ್ ಅಳವಡಿಸುವ ಸಂದರ್ಭದಲ್ಲಿ 1.8 ಅಡಿ ಆಳದಲ್ಲಿ ಹಾಕಬೇಕು. ಮೇಲಿನಿಂದ ಇಟ್ಟಿಗೆ ಇರಿಸಿ ಮರಳು ಹಾಕಿ ಅದರ ಮೇಲೆ ಮಣ್ಣು ತುಂಬಿಸಿ ಮುಚ್ಚಲಾಗುವುದು. ಇದರಿಂದ ಲೀಕೆಜ್ ಆಗುವುದಿಲ್ಲ. ಗುತ್ತಿಗೆದಾರರನ್ನು ಕರೆಸಿ ಹಾನಿಯಾದ ಕಡೆಗಳಲ್ಲಿ
ಸರಿ ಪಡಿಸಿಕೊಡುತ್ತೇವೆ. ಪರಿಹಾರದ ವ್ಯವಸ್ಥೆ ಇಲಾಖೆಯ ವತಿಯಿಂದ ಭರಿಸಲಾಗುವುದು ಎಂದು ತಿಳಿಸಿದರು.

ಇವತ್ತು ಗುತ್ತಿಗೆದಾರ ಬರುವುದಾಗಿ ತಿಳಿಸಿದ ಮೇರೆಗೆ ಗ್ರಾಮಸ್ಥರ ಸಮ್ಮುಖದಲ್ಲಿ ವಿಶೇಷ ಸಭೆ ಕರೆದಿದ್ದೇವೆ.ಇವತ್ತು ಅವರು ಬಾರದೆ ಗ್ರಾಮ ಸಭೆಯ ನಿರ್ಣಯಕ್ಕೆ ಅವಮರ್ಯಾದೆ
ಮಾಡಿದ ಹಾಗೆ
ಮುಂದಿನ ಸಲ ನೀವು ಮಾತ್ರ ಬರುವುದಲ್ಲ ಕೆಲಸ ನಿರ್ವಹಿಸುವ ಗುತ್ತಿಗೆದಾರರು ಬರಲೇಬೇಕು ಎಂದು ಅಸಮಾಧಾನಗೊಂಡ ಸದಸ್ಯ ಅಶೋಕ ಚೂಂತಾರು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಕಳಂಜ ಪಂಚಾಯತ್ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು, ಅಮರಮುಡ್ನೂರು
ಪಂಚಾಯತ್ ಉಪಾಧ್ಯಕ್ಷರು,ಸದಸ್ಯರು, ಪಿ. ಡಿ. ಒ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.