ಸುಬ್ರಹ್ಮಣ್ಯ: ತಲೆಗೆ ಗಾಯಗಳಾಗಿ ಮಾನಸಿಕ ರೋಗಿಯಂತೆ ವರ್ತಿಸುತ್ತಿದ್ದ ವ್ಯಕ್ತಿಗೆ ಚಿಕಿತ್ಸೆ

0

ಚಿಕಿತ್ಸೆ ಕೊಡಿಸಿದ ರವಿ ಕಕ್ಕೆಪದವು

ಇಲ್ಲಿದೆ ವೀಡಿಯೋ….

ಸುಬ್ರಹ್ಮಣ್ಯದ ರಥ ಬೀದಿಯಲ್ಲಿ ತಲೆ ತುಂಬ ಗಾಯಗೊಂಡು ಮಾನಸಿಕ ರೋಗಿಯಂತೆ ವರ್ತಿಸುತ್ತಿದ್ದ ಯುವಕನಿಗೆ ರವಿ ಕಕ್ಕೆಪದವು ಅವರು ಚಿಕಿತ್ಸೆ ಕೊಡಿಸಿದ ಘಟನೆ ಇಂದು ವರದಿಯಾಗಿದೆ.

ರಥ ಬೀದಿಯಲ್ಲಿ ತಲೆಗೆ ಗಾಯಗೊಂಡ ಯುವಕ, ಮಾನಸಿಕ ಅಸ್ವಸ್ಥನಂತೆ ಕಂಡು ಬಂದಿದ್ದಾನೆ. ಆತನನ್ನು ರವಿ ಕಕ್ಕೆಪದವು, ದೀಪಕ್ ನಂಬಿಯಾರ್ ಮತ್ತಿತರರು ವಿಚಾರಿಸಿ ಸುಬ್ರಹ್ಮಣ್ಯದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಚಿಕಿತ್ಸೆ ನೀಡಿರುವುದಾಗಿ ತಿಳಿದು ಬಂದಿದೆ. ಕಳೆದ ನಾಲ್ಕು ದಿನಗಳಿಂದ ಸುಬ್ರಹ್ಮಣ್ಯದಲ್ಲಿದ್ದರೂ ಯಾರು ಈ ಬಗ್ಗೆ ಚಿಕಿತ್ಸಾ ವ್ಯವಸ್ಥೆ ಮಾಡದಿದ್ದು ಕೊನೆಗೆ ರವಿ ಕಕ್ಕೆಪದವು ಅವರೇ ಚಿಕಿತ್ಸಾ ಜವಾಬ್ದಾರಿ ವಹಿಸಿದ್ದಾರೆ.


ಆ ಯುವಕನನ್ನು ಮೈಸೂರಿನ ವೃದ್ದಾಶ್ರಮ ಮತ್ತು ಪುನಶ್ಚೇತನ ಕೆಂದ್ರಕ್ಕೆ ಕರೆದೊಯ್ಯಲಾಗಿದೆ. ಸುಬ್ರಹ್ಮಣ್ಯ ಗ್ರಾಮ ಪಂಚಾಯತ್, ಸುಬ್ರಹ್ಮಣ್ಯ ಪೊಲೀಸ್ ಠಾಣೆ ಸಹಕಾರ ನೀಡಿರುವುದಾಗಿ ತಿಳಿದು ಬಂದಿದೆ.