ಅನ್ಸಾರಿಯಾ ಎಜುಕೇಶನ್ ಸೆಂಟರ್ ಸುಳ್ಯ ಇದರ ವತಿಯಿಂದ ಮದರಸ,ದಹವಾ,ಹಿಪ್ಳ್ ,ಶರಿಯತ್ ವಿದ್ಯಾರ್ಥಿಗಳಿಗೆ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮ ಆರ್ಟ್ಸ್ ಅಲೈವ್ ಸೆ.22,23,24,ಮತ್ತು25 ಸ್ವಲಾತ್ ವಾರ್ಷಿಕ ಕಾರ್ಯಕ್ರಮ ಅನ್ಸಾರಿಯಾ ಗಲ್ಫ್ ಆಡಿಟೋರಿಯಂ ನಲ್ಲಿ ನಡೆಯಲಿದೆ.
ಈ ಕಾರ್ಯಕ್ರಮದ ಅಂಗವಾಗಿ ಎರಡು ತಂಡಗಳನ್ನು ರಚನೆ ಮಾಡಿ ಅದರ ಮೂಲಕ ವಿದ್ಯಾರ್ಥಿಗಳ ಪ್ರತಿಭೆಗಳನ್ನು ಅನಾವರಣ ಮಾಡುವ ಅವಕಾಶ ಕಲ್ಪಿಸಲಾಗಿದೆ.















ಇದರ ತಂಡಗಳ ಧ್ವಜವನ್ನು ಸಾಹಿತಿ ಹಾಗೂ ಸಜ್ಜನ ಪ್ರತಿಷ್ಠಾನ ಅಧ್ಯಕ್ಷ ಡಾ.ಉಮ್ಮರ್ ಬೀಜದಕಟ್ಟೆ ವಿದ್ಯಾರ್ಥಿಗಳಿಗೆ ಹಸ್ತಾಂತರ ಮಾಡುವ ಮೂಲಕ ಕಾರ್ಯಕ್ರಮ ಪೂರ್ವ ತಯಾರಿಗೆ ಚಾಲನೆ ನೀಡಿದರು.
ಅನ್ಸಾರಿಯಾ ಎಜುಕೇಶನ್ ಸೆಂಟರ್ ಅಧ್ಯಕ್ಷ ಹಾಜಿ ಅಬ್ದುಲ್ ಮಜೀದ್ ಒಂದು ತಂಡದ ನಾಮಫಲಕ ವನ್ನು ಪ್ರಧಾನ ಕಾರ್ಯದರ್ಶಿ ಲತೀಫ್ ಹರ್ಲಡ್ಕ ಇನ್ನೊಂದು ತಂಡದ ನಾಮಫಲಕವನ್ನು ಬಿಡುಗಡೆಗೊಳಿಸಿದರು.
ಅನ್ಸಾರಿಯಾ ಮುದರಿಸ್ ಅಬೂಭಕ್ಕರ್ ಹಿಮಮಿ ಸಖಾಫಿ ದುವಾಶಿರ್ವಚನ ಮಾಡಿದರು.

ಸಯ್ಯದ್ ಹುಸೈನ್ ತಂಙಳ್ ಪ್ರಾಸ್ತಾವಿಕ ಮಾತನಾಡಿದರು.
ಕಾರ್ಯದರ್ಶಿ ಶರೀಫ್ ಜಟ್ಟಿಪಳ್ಳ, ನಿರ್ದೇಶಕರಾದ ಕೆ ಬಿ ಇಬ್ರಾಹಿಂ,ಉಪಾಧ್ಯಕ್ಷ ಎಸ್ ಪಿ ಅಬೂಭಕ್ಕರ್ ಶುಭ ಹಾರೈಸಿದರು.
ನಿರ್ದೇಶಕ ಶಹೀದ್ ಪಾರೆ,ಅಜೀಜ್ ಕಚ್ಚು,ಹಾಪೀಳ್ ಹಾಮಿದ್ ಸಖಾಫಿ, ಹಂಝತ್ತುಲ್ ಕರಾರ್ ಮಹಿನಿ , ಮದನಿ, ಸಿದ್ದಿಕ್ ಕಟ್ಟೆಕ್ಕಾರ್ ಮೊದಲಾದವರು ಉಪಸ್ಥಿತರಿದ್ದರು.










