ಶ್ರೀ.ಕ್ಷೇ.ಧ.ಗ್ರಾ.ಯೋ, ಬಿ ಲ.ಸಿ ಟ್ರಸ್ಟ್ ಬೆಳ್ಳಾರೆ ವಲಯದ ಪೆರುವಾಜೆ ಕಾರ್ಯಕ್ಷೇತ್ರದಲ್ಲಿ ಒಕ್ಕೂಟದ ವಾರ್ಷಿಕೋತ್ಸವ

0

ಶ್ರೀ.ಕ್ಷೇ.ಧ.ಗ್ರಾ.ಯೋ, ಬಿ ಲ.ಸಿ ಟ್ರಸ್ಟ್ ಬೆಳ್ಳಾರೆ ವಲಯದ ಪೆರುವಾಜೆ ಕಾರ್ಯಕ್ಷೇತ್ರದಲ್ಲಿ ಒಕ್ಕೂಟದ ವಾರ್ಷಿಕೋತ್ಸವ ಸೆ. 14ರಂದು ಪೆರುವಾಜೆ ಗ್ರಾ.ಪಂ. ಸಭಾಂಗಣದಲ್ಲಿ ನಡೆಯಿತು.

2025 ನೇ ಸಾಲಿನ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಮತ್ತು ಪ್ರಥಮವಾಗಿ ಪ್ರಾರಂಭವಾದ ಪ್ರಗತಿ ಬಂದು ಹಾಗೂ ಸ್ವಸಹಾಯ ಸಂಘದ ಸದಸ್ಯರುಗಳಿಗೆ ಅಭಿನಂದನೆ, ವಲಯ ಭಜನಾ ಪರಿಷತ್ ಅಧ್ಯಕ್ಷರಿಗೆ, ಶೌರ್ಯವಿಪತ್ತು ಘಟಕದ ಸದಸ್ಯರುಗಳಿಗೆ ಅಭಿನಂದನೆ ಕಾರ್ಯಕ್ರಮ ಜೊತೆಯಾಗಿ ಪೆರುವಾಜೆ ಒಕ್ಕೂಟದ ಪದಾಧಿಕಾರಿಗಳು, ಸದಸ್ಯರುಗಳ ಸಮ್ಮುಖದಲ್ಲಿ ನಡೆಯಿತು.

ಧರ್ಮಸ್ಥಳ ಗ್ರಾಮಭಿವೃದ್ದಿ ಯೋಜನೆಯ ಸುಳ್ಯ ತಾಲೂಕು ಯೋಜನಾಧಿಕಾರಿ ಮಾಧವ ಗೌಡ ಕಾರ್ಯಕ್ರಮ ಉದ್ಘಾಟಿಸಿ ಸಾಧಕರನ್ನು ಗೌರವಿಸಿ, ಯೋಜನೆ ನಡೆದು ಬಂದ ದಾರಿ ಮತ್ತು ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.