ಸಹಕಾರ ಸಂಘದಿಂದ ಈ ಬಾರಿ 30 ಸಾವಿರ ಕಾಫಿ ಗಿಡ : ವಿಕ್ರಂ ಅಡ್ಪಂಗಾಯ
ಸುಳ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಸಂಘದ ಗ್ರಾಹಕರಿಗೆ ಉಚಿತ ಹಾಗೂ ರಿಯಾಯಿತಿ ದರದಲ್ಲಿ ಕಾಫಿ ಗಿಡ ವಿತರಣೆಗೆ ಚಾಲನೆ ನೀಡಲಾಯಿತು.
















ಸೆ.16ರಂದು ಸುಳ್ಯ ಅಂಬಟೆಡ್ಕದ ಬಿಜೆಪಿ ಚೇರಿಯ ಅಟಲ್ ಜೀ ಚಾರಿಟೇಬಲ್ ಟ್ರಸ್ಟ್ ವಠಾರದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಸಿ.ಎ. ಬ್ಯಾಂಕ್ ಅಧ್ಯಕ್ಷ ವಿಕ್ರಂ ಅಡ್ಪಂಗಾಯರು ಗ್ರಾಹಕರಿಗೆ ಗಿಡ ವಿತರಣೆ ಮಾಡಿದರು. “ಮಹಾಸಭೆಯಲ್ಲಿ ನಾವು ಘೋಷಣೆ ಮಾಡಿದಂತೆ ಗ್ರಾಹಕರಿಗೆ ಕಾಫಿ ಗಿಡ ವಿತರಣೆ ಮಾಡುತ್ತಿದ್ದೇವೆ. ಒಬ್ಬರಿಗೆ 500 ಗಿಡ ರಿಯಾಯಿತಿ ದರದಲ್ಲಿ ನೀಡುತಿದ್ದು 5 ಗಿಡ ಉಚಿತವಾಗಿ ನೀಡಲಾಗುವುದು. ಈ ಬಾರಿ ಸುಮಾರು 30 ಸಾವಿರ ಗಿಡಗಳ ವಿತರಣೆ ಮಾಡುತ್ತೇವೆ” ಎಂದವರು ಹೇಳಿದರು.

ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ, ಸಿ.ಎ. ಬ್ಯಾಂಕ್ ನಿರ್ದೇಶಕರುಗಳಾದ ಎನ್.ಎ.ರಾಮಚಂದ್ರ, ಹೇಮಂತ್ ಕಂದಡ್ಕ, ಶಿವರಾಮ ಕೇರ್ಪಳ, ವಾಸುದೇವ ಪುತ್ತಿಲ, ಪ್ರಭೋದ್ ಶೆಟ್ಟಿ ಮೇನಾಲ, ನವ್ಯಾ ಚಂದ್ರಶೇಖರ ಅಡ್ಪಂಗಾಯ, ಹರಿಣಾಕ್ಷಿ ಬೇಲ್ಯ, ಸಿ.ಎ.ಬ್ಯಾಂಕ್ ಮಾಜಿ ಅಧ್ಯಕ್ಷ ಸುಭೋದ್ ಶೆಟ್ಟಿ ಮೇನಾಲ, ಗಿರೀಶ್ ಕಲ್ಲುಗದ್ದೆ, ಸಿ.ಎ.ಬ್ಯಾಂಕ್ ಸಿಬ್ಬಂದಿಗಳಾದ ನಾರಾಯಣ ಹಳೆಗೇಟು, ತೀರ್ಥರಾಮ ಕೇರ್ಪಳ ಮೊದಲಾದವರಿದ್ದರು.










