ಪ್ರಥಮ ಬಾರಿಗೆ ಭಾರತದ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ ಹಾಗೂ ಭಾರತೀಯ ಕ್ರೀಡಾ ಪ್ರಾಧಿಕಾರದ ಆಶ್ರಯದಲ್ಲಿ ಆಯೋಜಿಸುವ ವಿಶ್ವಮಟ್ಟದ ಅಂತಾರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್ ಕ್ರೀಡಾಕೂಟವು ನವದೆಹಲಿಯ ಜವಾಹರಲಾಲ್ ನೆಹರು ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸೆ.25 ರಿಂದ ಅ.5 ರವರೆಗೆ ನಡೆಯಲಿದ್ದು ಈ ಕ್ರೀಡಾಕೂಟಕ್ಕೆ ತಾಂತ್ರಿಕ ಅಧಿಕಾರಿಯಾಗಿ ಕರ್ನಾಟಕ ರಾಜ್ಯದಿಂದ ಡಾ. ರಾಮಚಂದ್ರ ಕೆ. ರವರು ಆಯ್ಕೆಯಾಗಿದ್ದಾರೆ.















ಇವರು ಪ್ರಸ್ತುತ ಡಾ.ಕೆ.ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ಳಾರೆಯಲ್ಲಿ ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದು ಮೂಲತಃ ನೆಲ್ಯಾಡಿಯ ಕೌಕ್ರಾಡಿ ಸೀನಪ್ಪ ಗೌಡ ಹಾಗೂ ಧರ್ಣಮ್ಮರವರ ಪುತ್ರ. ಪ್ರಸ್ತುತ ಪುತ್ತೂರಿನ ಬೊಳ್ಪಾರು ಕರ್ಮಲ ನಿವಾಸಿ.










