ಬೆಳ್ಳಾರೆ – ಕಲ್ಲೋಣಿ ರಸ್ತೆ ಕಾಮಗಾರಿ ಕೆಲಸ ಪ್ರಾರಂಭ

0

ಬೆಳ್ಳಾರೆ ಕಲ್ಲೋಣಿ ರಸ್ತೆ ಕಾಮಗಾರಿ ಕೆಲಸ ಬೆಳ್ಳಾರೆಯಿಂದ ಪ್ರಾರಂಭಗೊಂಡಿದೆ.
ಬೆಳ್ಳಾರೆಯಿಂದ ಕಲ್ಲೋಣಿವರೆಗೆ ಮುಖ್ಯ ರಸ್ತೆಗೆ ರೂ.10. ಕೋಟಿ ಮಂಜೂರಾಗಿದ್ದು ರಸ್ತೆ ಅಗೆಯುವ ಕೆಲಸ ಪ್ರಾಮಭಗೊಂಡಿದೆ.


ಒಂದು ಬದಿಯಿಂದ ಹಳೆ ಡಾಮರೀಕರಣ ರಸ್ತೆಯನ್ನು ಜೆಸಿಬಿ ಮೂಲಕ ಅಗೆಯುತ್ತಿದ್ದು ಹಳೆಯ ರಸ್ತೆಯನ್ನು ಸಂಪೂರ್ಣ ಅಗೆದು ಹೊಸ ಡಾಮರೀಕರಣವಾಗಿ ರಸ್ತೆ ನಿರ್ಮಾಣವಾಗಲಿದೆ.
ಕೆಲ ತಿಂಗಳ ಹಿಂದೆ ರಸ್ತೆ ನಿರ್ಮಾಣಕ್ಕೆ ಶಾಸಕಿ ಭಾಗೀರಥಿ ಮುರುಳ್ಯರವರು ಗುದ್ದಲಿ ಪೂಜೆ ನೆರವೇರಿಸಿದ್ದರು.


ಬಳಿಕ ಮಳೆಗಾಲ ಪ್ರಾರಂಭವಾದುದರಿಂದ ಕೆಲಸ ಸ್ಥಗಿತಗೊಂಡಿತ್ತು.
ಈಗ ರಸ್ತೆ ಕಾಮಗಾರಿ ಪ್ರಾರಂಭಗೊಂಡಿದೆ.