ಆಧಾರ್ ತಿದ್ದುಪಡಿ, ಅಂಚೆ ಇಲಾಖೆಯಸೌಲಭ್ಯಗಳ ಬಗ್ಗೆ ಮಾಹಿತಿ ಮತ್ತು ನೋಂದಣಿ ಕಾರ್ಯಕ್ರಮ
ಪ್ರಯೋಜನ ಪಡೆದ 185 ಫಲಾನುಭವಿಗಳು
ಕೊಲ್ಲಮೊಗ್ರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ನಿಯಮಿತ ವತಿಯಿಂದ ಭಾರತೀಯ ಅಂಚೆ ಇಲಾಖೆ ಪುತ್ತೂರು ಇವರ ಸಹಯೋಗದೊಂದಿಗೆ
ಆಧಾರ್ ತಿದ್ದುಪಡಿ ಮತ್ತು ಭಾರತೀಯ ಅಂಚೆ ಇಲಾಖೆಯಲ್ಲಿ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ಮತ್ತು ನೋಂದಣಿ ಕಾರ್ಯಕ್ರಮ ಮೂರು ದಿನಗಳ ಕಾಲ ನಡೆಯಿತು.
















ಸೆ.14 ರ ರಂದು ಸೊಸೈಟಿಯ ಮಹಾಸಭೆ ದಿನ ಶ್ರೀ ಮಯೂರ ಕಲಾಮಂದಿರ, ಕೊಲ್ಲಮೊಗ್ರು ಇಲ್ಲಿ ಹಾಗೂ. ಸೆ.15 ರಿಂದ ಸೆ.16 ರಂದು ಕೊಲ್ಲಮೊಗ್ರು ಹರಿಹರ ಪ್ರಾ.ಕೃ.ಪ.ಸ.ಸಂಘದ ಪ್ರಧಾನ ಕಚೇರಿಯಲ್ಲಿ ಈ ಶಿಬಿರ ನಡೆಯಿತು. ಇದರಲ್ಲಿ 185 ಜನ ಫಲಾನುಭಿಗಳು ಪ್ರಯೋಜನ ಪಡೆದು ಕೊಂಡರು










